ಕಳೆದ ಮಂಗಳವಾರ ವಿಧಿವಶರಾದ ರಾಜ್ಯದ ಮಾಜಿ ಶಿಕ್ಷಣ ಸಚಿವ ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದೀನ್ (81) ರಾಜ್ಯಕಂಡ ಸ್ವಚ್ಛ ಆಡಳಿತಗಾರ ಎಂದು ಮಾಜಿ ಸಚಿವ, ಹಿರಿಯ ರಾಜಕಾರಣಿ ಯಂ.ಸಿ. ನಾಣಯ್ಯ ಬಣ್ಣಸಿದ್ದಾರೆ. ಬಿ.ಎ. ಮೊಹಿದೀನ್, ಈಗಿನ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗಡೆ ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಹಾಗೂ ತಾವು ಒಂದೇ ಸೈದ್ಧಾಂತಿಕ ನಿಲುವನ್ನು ಹೊಂದಿರುವವರು ಎಂದು ಹೇಳಿದ ಎಂ.ಸಿ.ಎನ್ - ಮೊಹಿದೀನ್ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ಈ ಕೆಳಗಿನಂತೆ ವಿವರಿಸಿದರು.

“ಮಿತ್ರ ಮೊಹಿದೀನ್ ಅವರು ಕರಾವಳಿ ಭಾಗÀದ ಬ್ಯಾರಿ ಸಮುದಾಯ ಸೇರಿದಂತೆ ಎಲ್ಲ ಜನಾಂಗದ ಬಡ ವರ್ಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಬದ್ಧತೆಯಿಂದ ಕೆಲಸ ಮಾಡಿದವರು. ವಿಶೇಷವಾಗಿ ಬ್ಯಾರಿ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಕಾರಣಕರ್ತರಾದವರು ಬಿ.ಎ. ಮೊಹಿದೀನ್. ‘ಬ್ಯಾರಿ ಆಫ್‍ದ ಸೆಂಚುರಿ’ ಹಾಗೂ ‘ಬ್ಯಾರಿ ಅಕಾಡೆಮಿ’ ಸ್ಥಾಪನೆಗೂ ಅವರು ಶ್ರಮಿಸಿದ್ದಾರೆ. ಅವರು ವಿಧಿವಶ ಆಗುವ ಮುನ್ನಾದಿನ ನಾನು ಅವರಿಗೆ ಕರೆ ಮಾಡಿದ್ದೆ. ಅವರು ನನ್ನನ್ನು ‘ಏ. ನಾಣಯ್ಯ’ ಎಂದು ಕರೆಯುತ್ತಿದ್ದು ನಾನು ಅವರನ್ನು ‘ಏ ಬ್ಯಾರಿ’ ಎಂದು ಕರೆಯುತ್ತಿದ್ದೆ. ಅಷ್ಟರ ಮಟ್ಟಿಗೆ ನಮ್ಮ ನಡುವೆ ಸಲುಗೆ ಇತ್ತು. ನಾನು ಬರೆದ “ನನ್ನೊಳಗಿನ ನಾನು” ಎಂಬ ಪುಸ್ತಕದ ಬಿಡುಗಡೆ ಸಮಾರಂಭ ತಾ. 20 ರಂದು ನಡೆಯಲಿದೆ ಎಂದು ಹೇಳಿ ನನ್ನನ್ನು ತಾ. 19ಕ್ಕೆ ಬರಬೇಕು ಎಂದು ಆಹ್ವಾನಿಸಿದ ಮರುದಿನ ಮುಂಜಾನೆÉಯೇ ಮಿತ್ರ ಮೊಹಿದೀನ್ ಇಹಲೋಕ ಜೀವನಕ್ಕೆ ವಿದಾಯ ಹೇಳಿದ್ದರು. ಅವರ ಪುತ್ರ ಬೆಳಿಗ್ಗೆ ಫೋನಾಯಿಸಿ ಮರಣ ವಾರ್ತೆ ತಿಳಿಸಿದಾಗ ನಾನು ದಿಗ್ಭ್ರಾಂತನಾದೆ. ದೈಹಿಕವಾಗಿ ಅವರು ಇಂದು ಇಲ್ಲದಿದ್ದರೂ ಅವರ ಒಡನಾಟ, ಚಿಂತನೆ ನನ್ನೊಳಗೆ ಜೀವಂತವಾಗಿದೆ. ಮೊಹಿದೀನ್ ನನಗಿಂತ ಮೊದಲೇ ರಾಜಕೀಯಕ್ಕೆ ಬಂದವರು. ಕಾಂಗ್ರೆÀ್ರಸ್ ಇಬ್ಭಾಗವಾದ ಸಂದರ್ಭ ನಾನು ದೇವರಾಜ ಅರಸು ಅವರ ಜೊತೆ ನಿಂತೆ. ಮೊಹಿದೀನ್ ಕಾಂಗ್ರೆಸ್‍ನಲ್ಲೇ ಇದ್ದರೂ ನಮ್ಮ ನಡುವಣ ಸಂಬಂಧಕ್ಕೆ ಧಕ್ಕೆ ಬಂದಿರಲಿಲ್ಲ. ಜೆ.ಹೆಚ್. ಪಟೇಲ್ ಅವರ ಸಂಪುಟದಲ್ಲಿ ನಾನು ವಾರ್ತಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವನಾದಾಗ ಮೊಹಿದೀನ್ ಉನ್ನತ ಶಿಕ್ಷಣ ಹಾಗೂ ಸಣ್ಣ ಕೈಗಾಕಾ ಸಚಿವರಾಗಿದ್ದರು. ಅವರ ಸರಳತೆ ಒಳ್ಳೆಯತನ ಸ್ವಚ್ಛ ಮನಸ್ಸು ಇಂದಿನ ಪ್ರತಿಯೋರ್ವ ರಾಜಕಾರಣಿಗೂ ಆದರ್ಶವಾದುದು. ಬಿ.ಎ. ಮೊಹಿದೀನ್ ಅವರ ಕುರಿತು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ ನಾಣಯ್ಯ ಅವರು ತಾ. 20 ರಂದು ನಡೆಯಲಿರುವ ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳಲಿರುವದಾಗಿ ಹೇಳಿದರು.