ಭಾಗಮಂಡಲ, ಜು. 14: ಭಾಗಮಂಡಲ ಸನಿಹದ ಅಯ್ಯಂಗೇರಿ ಗ್ರಾಮವು ಸಂಪರ್ಕ ಕಳೆÉದುಕೊಂಡ ದ್ವೀಪದಂತಾಗಿ ಪರಿವರ್ತಿತ ಗೊಂಡಿ ರುವದರೊಂದಿಗೆ ಸಣ್ಣಪುಲಿಕೋಟು, ಕೋರಂಗಾಲ ಗ್ರಾಮಗಳ ಸ್ಥಿತಿಯೂ ಶೋಚ ನೀಯವಾಗಿದೆ. ಭಾಗಮಂಡಲದ ನಾಗರಿಕರಂತೂ ಸೂಕ್ತ ಸಂಚಾರ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಅಯ್ಯಂಗೇರಿಗೆ ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಂಡಿದ್ದು ಅಲ್ಲಿನ ವಾಹನಗಳಿಗೆ ಇಂಧನವಿಲ್ಲದೆ ಜನರು ಬೇರೆ ಸ್ಥಳಗಳಿಗೆ ತೆರಳದಂತಹ ಸಂಕಷ್ಟ ಎದುರಾಗಿದೆ. ಅಡುಗೆ ಅನಿಲದ ಸರಬರಾಜಿಗೆ ತೊಡಕಾಗಿದ್ದು, ಜನರು ಬವಣೆ ಪಡುತ್ತಿದ್ದಾರೆ.ಇನ್ನೊಂದಡೆ ಬಿತ್ತನೆ ಮಾಡಿದ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದ್ದು ‘ಮುಂದಿನ ದಾರಿ ಏನು?’ ಎಂದು ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದಾರೆ.ಈ ನಡುವೆ ಅಯ್ಯಂಗೇರಿಯ ಚಿನ್ನತಪ್ಪ ದೇವಾಲಯದ ಹಿಂಭಾಗ ಪ್ರದೇಶದಲ್ಲಿ ಆನೆಯೊಂದು ಸಂಚರಿಸುತ್ತಿದ್ದು ಗ್ರಾಮಸ್ಥರು ಇನ್ನೂ ಗಾಬರಿಗೊಂಡಿದ್ದಾರೆ. ಭಾಗಮಂಡಲ ಹೋಬಳಿ ಪ್ರದೇಶದ ಎಲ್ಲ ಗ್ರಾಮಗಳು ವಿದ್ಯುತ್
(ಮೊದಲ ಪುಟದಿಂದ) ಸರಬರಾಜಿಲ್ಲದೆ ಕತ್ತಲೆಯಲ್ಲಿ ಮುಳುಗಿವೆ. ಮಳೆ ಇದೇ ರೀತಿ ಮುಂದುವರಿದರೆ ಅಪಾಯದಲ್ಲಿರುವ ಬರೆಗಳು ಕುಸಿತಗೊಂಡು ಅನಾಹುತ ಸಂಭವಿಸುವ ಭೀತಿಯಿದೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈಗ ಭಾಗಮಂಡಲದಲ್ಲಿ ಒಂದು ಬದಿಯಲ್ಲ್ಲಿರುವ ವಾಹನಗಳು ಮತ್ತೊಂದು ಬದಿಗೆ ತೆರಳಲು ಸಾಧ್ಯವಾಗದೆ ನೀರಿನಲ್ಲಿ ನಡೆದು ಬಂದ ಜನರನ್ನು ಒಯ್ಯುತ್ತಿದ್ದು ಇದೀಗ ಈ ವಾಹನಗಳಿಗೂ ಇಂಧನದ ಕೊರತೆಯುಂಟಾಗಿದೆ. ಮಡಿಕೇರಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‍ಗೂ ತೆರಳಲು ಅಸಾಧ್ಯವೆನಿಸಿದೆ. ಪ್ರವಾಹ ಜಲದಿಂದಾಗಿ ಭಾಗಮಂಡಲ ರಸ್ತೆಗಳಲ್ಲಿ ಬೃಹತ್ ಹೊಂಡಗಳಾಗಿದ್ದು ಸಂಚಾರಕ್ಕೆ ತೀವ್ರ ಧಕ್ಕೆಯಾಗಲಿದೆ.