ಮಡಿಕೇರಿ, ಜು. 14: ಕಾಫಿ ಬೆಳೆಗಾರರ ಸಮಸ್ಯೆ ಕುರಿತು ಕೇಂದ್ರ ಸಂಸದೀಯ ಆರ್ಥಿಕ ಸಮಿತಿ ನಿನ್ನೆ ಕೊಡಗು ಬೆಳೆಗಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿತು.

ಸಮಿತಿ ಅಧ್ಯಕ್ಷ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊೈಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಬಿ.ಎಂ. ಬೋಪಯ್ಯ ಹಾಗೂ ಇತರರು ಪಾಲ್ಗೊಂಡಿದ್ದರು. ಸಮಿತಿಗೆ ಸಲ್ಲಿಸಿದ ಮನವಿಯಲ್ಲಿ ಕಾಫಿ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಬಗ್ಗೆ ಗಮನ ಸೆಳೆಯಲಾಯಿತು.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಉತ್ಪಾದನೆ ಹೆಚ್ಚಾಗುತ್ತಿರುವದರಿಂದ ಭಾರತೀಯ ಕಾಫಿಯ ದರ ಕುಸಿತ, ರೂಲ್ 7ಬಿ ಅನ್ನು ತೆಗೆಯುವದು, ಅಧಿಕವಿರುವ ಫಾರಂ ಸಾಲದ ಬಡ್ಡಿಯನ್ನು 6ಕ್ಕೆ ಇಳಿಸುವದು, ಕರಿಮೆಣಸು ಆಮದು ವ್ಯವಹಾರದಲ್ಲಿ ನಡೆಯುತ್ತಿರುವ ಕಳ್ಳ ವ್ಯವಸ್ಥೆ, ಕಾಫಿಗೆ ಸ್ಥಿರ ದರ, ಮಾನವ ಆನೆ ಸಂಘರ್ಷ, ಕಾಫಿಗೆ ಇರುವ ಸಬ್ಸಿಡಿ ವ್ಯವಸ್ಥೆ ಮುಂದುವರಿಕೆ ಬಗ್ಗೆ ಎನ್. ಬೋಸ್ ಮಂದಣ್ಣ, ಎ. ನಂದಾ ಬೆಳ್ಯಪ್ಪ ಹಾಗೂ ಟಿ.ಎಂ. ಪ್ರದೀಪ್ ಪೂವಯ್ಯ ಗಮನ ಸೆಳೆದರು. ಸಂಘದ ಉಪಾಧ್ಯಕ್ಷ ಕೆ.ಜಿ. ರಾಜೀವ್, ಎಂ.ಸಿ. ಕಾರ್ಯಪ್ಪ, ಎನ್. ರಾಮನಾಥನ್, ಬಿ.ವಿ. ಮೋಹನ್ ದಾಸ್, ಎ.ಎ. ಚಂಗಪ್ಪ, ಎ.ಎ. ಗಣಪತಿ ಹಾಗೂ ಕಾರ್ಯದರ್ಶಿ ಸಿ.ಕೆ. ಬೆಳ್ಳಿಯಪ್ಪ ಪಾಲ್ಗೊಂಡಿದ್ದರು.