ಗೋಣಿಕೊಪ್ಪ ವರದಿ, ಜು. 14: ತಿತಿಮತಿ - ಮೈಸೂರು ರಾಜ್ಯ ಹೆದ್ದಾರಿಯ ಮಜ್ಜಿಗೆಹಳ್ಳ ಎಂಬಲ್ಲಿ ರಸ್ತೆಗೆ ಬಿದ್ದಿದ್ದ ಮರವನ್ನು ಸಾಕಾನೆ ಮೂಲಕ ತೆರವುಗೊಳಿಸಲಾಯಿತು.
ಸಾಯಂಕಾಲ 2.45 ಗಂಟೆ ಸುಮಾರಿಗೆ ಕಾಡಿನಲ್ಲಿದ್ದ ಹೊನ್ನೆ ಮರ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಸುಮಾರು 30 ನಿಮಿಷಗಳ ಕಾಲ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೆದ್ದಾರಿಯಾದ ಕಾರಣ ಹೆಚ್ಚಿನ ವಾಹನಗಳು ಸಂಚರಿಸಲಾಗದೆ ಸ್ಥಗಿತಗೊಂಡಿತ್ತು. ಈ ಸಂದರ್ಭ ಅರಣ್ಯ ಇಲಾಖೆ ಮೂಲಕ ಮತ್ತಿಗೋಡು ಸಾಕಾನೆ ಶಿಬಿರದ ಕೃಷ್ಣ ಆನೆಯ ಮೂಲಕ ಮರವನ್ನು ತೆರವುಗೊಳಿಸಲಾಯಿತು.