ಸುಂಟಿಕೊಪ್ಪ, ಜು.13: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕಾಲಾವಧಿ ಮುಗಿದ ಔಷಧಿಗಳನ್ನು ಆಸ್ಪತ್ರೆಯ ಸಮೀಪದಲ್ಲಿರುವ ಕಸದ ತೊಟ್ಟಿಯಲ್ಲಿ ಹಾಕಿ ಬೆಂಕಿ ಹಚ್ಚಿದರಿಂದ ಇಡೀ ವಾತಾವರಣವನ್ನೇ ಗಬ್ಬೆದ್ದು ನಾರುತ್ತಿರುವಂತೆ ಮಾಡಿದ್ದಾರೆ. ಈ ಭಾಗದ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಗಿಗಳಿಗೆ ಉಚಿತವಾಗಿ ನೀಡಲಾಗುವ ಜೌಷಧಿ, ಇಂಜಕ್ಷನ್‍ಗಳು ಬಳಕೆಗೆ ಬಾರದೆ ಇರುವ ಕಾಲಾವಧಿ ಮುಗಿದ ಔಷಧಿಗಳನ್ನು ಆಸ್ಪತ್ರೆಯ ಸಮೀಪದಲ್ಲಿರುವ ಅಂಗಡಿಗಳ ಅಕ್ಕಪಕ್ಕದಲ್ಲಿ ಇರಿಸಲಾಗಿರುವ ಸಾರ್ವಜನಿಕರ ತೊಟ್ಟಿಯಲ್ಲಿ ಸುರಿದು ಗುರುವಾರ ಸಂಜೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿದರ ಪರಿಣಾಮವಾಗಿ ಇಡೀ ವಾತಾವರಣವೇ ಹೊಗೆಯಿಂದ ಆವೃತ್ತವಾಗಿ ಸ್ಥಳೀಯ ಅಂಗಡಿಯ ಮಾಲೀಕರು ಜನರು ಓಡಾಡದಂತಹ ಪರಿಸ್ಥಿತಿ ತಲೆದೋರಿತ್ತು.