ಮಡಿಕೇರಿ, ಜು. 13 : ಕೇಂದ್ರ ಪುರಸ್ಕøತ ಯೋಜನೆಯಾದಂತಹ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಾಗೂ ರಾಜ್ಯ ಸರ್ಕಾರದ ಇತರೆ ವಸತಿ ಯೋಜನೆಯಡಿ ವಸತಿ ಸೌಕರ್ಯವನ್ನು ಒದಗಿಸಲು ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲುವಾಗಿ ಸಾಮಾಜಿಕ ಆರ್ಥಿಕ ಜಾತಿಗಣತಿ 2011 ರ ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ವಸತಿ ರಹಿತ ಹಾಗೂ ನಿವೇಶನ ರಹಿತ ಪಟ್ಟಿಗೆ ಸೇರಿಸಲು ಸರ್ಕಾರ ನಿರ್ದೇಶನ ನೀಡಿದೆ.
ಅದರಂತೆ ಜಿಲ್ಲಾದ್ಯಂತ ಮರು ಸಮೀಕ್ಷೆ ಪ್ರಕ್ರಿಯೆಯನ್ನು ಗ್ರಾ.ಪಂ.ಗಳ ಮೂಲಕ ನಡೆಸಲಾಗಿದ್ದು, ಅಂತಿಮವಾಗಿ ವಸತಿ ಮತ್ತು ನಿವೇಶನ ರಹಿತ ಶಾಶ್ವತ ಪಟ್ಟಿಯನ್ನು ತಯಾರಿಸಿ ತಂತ್ರಾಂಶದಲ್ಲಿ ನೋಂದಾಯಿಸಲಾಗುವದು. ಆದ್ದರಿಂದ ಅರ್ಹ ಫಲಾನುಭವಿಗಳು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ, ತಮ್ಮ ಹೆಸರು ನೋಂದಾಯಿಸಲು ತಾ. 31 ಕೊನೆ ದಿನವಾಗಿದೆ ಎಂದು ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.