ಗೋಣಿಕೊಪ್ಪ ವರದಿ, ಜು. 14 : ನಿಟ್ಟೂರು ಗ್ರಾಮ ಪಂಚಾಯಿತಿ ವಾರ್ಡ್ ಸಭೆ ತಾ. 16 ರಂದು ನಡೆಯಲಿದೆ. ಕೊಟ್ಟಗೇರಿ ಸಮುದಾಯ ಭವನದಲ್ಲಿ ಕೊಟ್ಟಗೇರಿ ವಾರ್ಡ್ ಸಭೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ವಡ್ಡರಮಾಡು ವಾರ್ಡ್ ಸಭೆ ಅಲ್ಲಿನ ಸಮುದಾಯ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ, ಪಾಲದಳ ವಾರ್ಡ್ ಸಭೆ ಪಾಲದಾಳ ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ 2 ಕ್ಕೆ ನಡೆಯಲಿದೆ. ನಿಟ್ಟೂರು- ಕಾರ್ಮಾಡು ಸಮುದಾಯ ಭವನದಲ್ಲಿ ಗ್ರಾ. ಪಂ. ಅಧ್ಯಕ್ಷೆ ಕೆ.ಪಿ. ಅನಿತಾ ಅಧ್ಯಕ್ಷತೆಯಲ್ಲಿ ತಾ. 18 ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.