ಮಡಿಕೇರಿ, ಜು. 14: ಶ್ರೀಮಂಗಲ ಗ್ರಾಮ ಪಂಚಾಯಿತಿಯ ಕುಮುಟೂರು ಗ್ರಾಮದ ವಾರ್ಡ್‍ಸಭೆ ಗ್ರಾ.ಪಂ. ಸದಸ್ಯ ಕಳ್ಳಂಗಡ ರಜಿತ್ ಪೂವಣ್ಣ ಅವರ ಅಧ್ಯಕ್ಷತೆಯಲ್ಲು ತಾ. 16ರಂದು ಬೆಳಿಗ್ಗೆ 10 ಗಂಟೆಗೆ ಕುಮುಟೂರು ಹೇರ್ಮಾಡು ದೇವಸ್ಥಾನದಲ್ಲಿ ನಡೆಯಲಿದೆ.

ಶ್ರೀಮಂಗಲ ಗ್ರಾ.ಪಂ.ಯ ಶ್ರೀಮಂಗಲ ಗ್ರಾಮದ ವಾರ್ಡ್‍ಸಭೆ ಗ್ರಾ.ಪಂ. ಸದಸ್ಯ ಸಿ.ಜೆ. ಕಾಳಯ್ಯ ಅವರ ಅಧ್ಯಕ್ಷತೆಯಲ್ಲಿ ತಾ;. 17ರಂದು ಮಧ್ಯಾಹ್ನ 12 ಗಂಟೆಗೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ.

ಕುರ್ಚಿ ಗ್ರಾಮದ ವಾರ್ಡ್ ಸಭೆ ಗ್ರಾ.ಪಂ. ಅಧ್ಯಕ್ಷ ಎ.ಸಿ. ಜಯ ಅವರ ಅಧ್ಯಕ್ಷತೆಯಲ್ಲಿ ತಾ. 17ರಂದು ಪೂರ್ವಾಹ್ನ 10 ಗಂಟೆಗೆ ಕುರ್ಚಿ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

ಬೀರುಗ ಗ್ರಾಮದ ವಾರ್ಡ್‍ಸಭೆ ಗ್ರಾ.ಪಂ. ಸದಸ್ಯ ಎ.ಯು. ರೇಣು ಅವರ ಅಧ್ಯಕ್ಷತೆಯಲ್ಲಿ ತಾ. 16ರಂದು ಪೂರ್ವಾಹ್ನ 12 ಗಂಟೆಗೆ ಬೀರುಗ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

ಗ್ರಾಮಸಭೆ: ಶ್ರೀಮಂಗಲ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಗ್ರಾಮಸಭೆ ತಾ. 23ರಂದು ಪೂರ್ವಾಹ್ನ 11 ಗಂಟೆಗೆ ಗ್ರಾ.ಪಂ. ಸಭಾಂಗಣದಲ್ಲಿ, ಗ್ರಾ.ಪಂ. ಅಧ್ಯಕ್ಷೆ ಚೋಕೀರ ಕಲ್ಪನಾ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡೆಲ್ ಅಧಿಕಾರಿಯಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.