ಮಡಿಕೇರಿ, ಜು. 13: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ಅವರಿಂದ ಯಾಂತ್ರೀಕÀೃತ ಭತ್ತದ ನಾಟಿಗೆ ಸಸಿ ಮಡಿ ತಯಾರಿಕೆ ಬಗ್ಗೆ ಪೊದ್ದುಮಾನಿ ಗ್ರಾಮದ ಬಲೇರಿಯಂಡ ಕಾವೇರಪ್ಪ ಅವರ ಭತ್ತದ ಗದ್ದೆಯಲ್ಲಿ ಪ್ರಾತ್ಸಕ್ಷಿಕೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚಾರೆಡ್ಡಿ, ಭತ್ತದ ಕೃಷಿಯು ಲಾಭದಾಯಕವಲ್ಲವೆಂದು ಆನೇಕ ರೈತರು ಗದ್ದೆಗಳನ್ನು ಪಾಳು ಬಿಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಆಹಾರ ಲಭ್ಯತೆ ಹಾಗೂ ಅಂರ್ತಜಲ ಕುಸಿಯವ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಭತ್ತ ಬೆಳೆಯುವಲ್ಲಿ ಖರ್ಚನ್ನು ಕಡಿಮೆಗೊಳಿಸಲು ಯಾಂತ್ರಿಕೃತ ನಾಟಿಗೆ ಸಸಿ ಮಡಿಗಳನ್ನು ಬೆಳೆಸಿ ಕೊಳ್ಳುವಲ್ಲಿ ಪ್ಲಾಸಿಟಿಕ್-ಟ್ರೆ ಅಥವಾ ತಟ್ಟೆ ವಿಧಾನ ಒಂದು ವಿಧವಾಗಿದ್ದು, ಇದರ ಬಗ್ಗೆ ಸ್ಥಳಿಯ ರೈತರಿಗೆ ಪ್ರಾತ್ಸಕ್ಷಿಕೆ ಮೂಲಕ ತಿಳಿಸಿಕೊಡಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಸುಜು ಕರುಂಬಯ್ಯ ಪ್ಲಾಸಿಟಿಕ್ ಟ್ರೆಗಳಲ್ಲಿ ಮಣ್ಣು ತುಂಬಿಸುವ ವಿಧಾನ, ಬೀಜ ಬಿತ್ತನೆ ಹಾಗೂ ತದನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಕೃಷಿ ಇಲಾಖೆಯ ಆಧಿಕಾರಿಗಳಾದ ಪ್ರಿಯಾಂಕ, ನಮಿತ ಮತ್ತು ಜಸ್ಮಿನ್ ಹಾಜರಿದ್ದರು. ಪೊದ್ದುಮಾನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 40 ಜನ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಸ್ಥಳೀಯ ಮಹಿಳಾ ಸಂಘದ ಅಧಕ್ಷೆ ಸುಶೀಲ ಕಾವೇರಪ್ಪ ನಿರೂಪಿಸಿ, ವಂದಿಸಿದರು.