ಮಡಿಕೇರಿ, ಜು. 15: ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ ರೂ. 42.69 ಲಕ್ಷ ನಿವ್ವಳ ಲಾಭಗಳಿಸಿವೆ ಎಂದು ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಎಂ.ಎಂ. ಬೋಪಯ್ಯ ತಿಳಿಸಿದ್ದಾರೆ.
ಸಂಘವು 8 ಗ್ರಾಮದ ವ್ಯಾಪ್ತಿಯಲ್ಲಿ ಒಳಪಟ್ಟಿದ್ದು, ಸುಮಾರು 2630 ಸದಸ್ಯರುಗಳನ್ನು ಹೊಂದಿದ್ದು, ಸಂಘವು ರೂ. 1,56,74,445 ಷೇರು ಬಂಡವಾಳವನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ರೂ. 23,82,98,980ಗಳ ವಹಿವಾಟು ನಡೆಸಿದೆ. ರೂ. 42.69 ಲಕ್ಷ ನಿವ್ವಳ ಲಾಭಗಳಿಸಿದೆ ಹಾಗೂ ನಿವ್ವಳ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ. 15 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಕೆ.ಸಿ.ಸಿ. ಸಾಲವಾಗಿ ರೂ. 12.38 ಲಕ್ಷಗಳನ್ನು ಹಾಗೂ ಸ್ವಂತ ಬಂಡವಾಳದಿಂದ 84 ಸ್ವಸಹಾಯ ಗುಂಪುಗಳಿಗೆ ರೂ. 3.30 ಲಕ್ಷಗಳು, ಆಭರಣ ಸಾಲ ಮತ್ತು ಜಾಮೀನು ಸಾಲವಾಗಿ ರೂ.2.60 ಲಕ್ಷಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದ್ದಾರೆ.
ಸಂಘದಲ್ಲಿ ಸದಸ್ಯರಿಗೂ ಹಾಗೂ ಸದಸ್ಯೇತರರಿಗೂ ಗೊಬ್ಬರ ಮಾರಾಟದ ವ್ಯವಸ್ಥೆ, ಲಾಕರ್ ವ್ಯವಸ್ಥೆ, ಮದುವೆ ಸಮಾರಂಭಗಳಿಗೆ ಸಭಾಂಗಣದ ವ್ಯವಸ್ಥೆಗಳಿದ್ದು, ಸಂಘದ ಸದಸ್ಯರು ಹಾಗೂ ಸದಸ್ಯೇತರರು ಇದರ ಸದುಪಯೋಗವನ್ನು ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕಾಗಿ ಸಭೆಯಲ್ಲಿ ಅಧ್ಯಕ್ಷ ಎಂ.ಎಂ. ಬೋಪಯ್ಯ ಸಲಹೆ ನೀಡಿದರು.
ಉಪಾಧ್ಯಕ್ಷ ಬಿ.ಬಿ. ಕರುಂಬಯ್ಯ ಹಾಗೂ ನಿರ್ದೇಶಕರುಗಳಾದ ಎಂ.ಎಸ್. ಮುತ್ತಪ್ಪ, ಡಿ.ಹೆಚ್. ವಿಶ್ವನಾಥರಾಜರಸ್, ಟಿ.ಕೆ. ರಮೇಶ್, ಕೆ.ಎಲ್. ಹೊನ್ನಪ್ಪ, ಹೆಚ್.ಜೆ. ಬಸಪ್ಪ, ಕೆ.ಪಿ. ರೋಶನ್, ಡಿ.ಸಿ. ಸಬಿತ, ಎನ್.ಎಂ. ಲಲಿತ ಹಾಗೂ ಸಂಘದ ಮೇಲ್ವಿಚಾರಕರು ಉಪಸ್ಥಿತರಿದ್ದರು.