ಸೋಮವಾರಪೇಟೆ, ಜು. 15: ಒಕ್ಕಲಿಗರಲ್ಲಿ ಪರಸ್ಪರ ಬಾಂಧವ್ಯ, ಕ್ರೀಡಾ ಸ್ಫೂರ್ತಿ ಉತ್ತೇಜಿಸುವ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ತಾ. 21 ರಂದು ತಾಕೇರಿ ಗ್ರಾಮದಲ್ಲಿ 5ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ಉಪಾಧ್ಯಕ್ಷ ನತೀಶ್ ಮಂದಣ್ಣ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಕೇರಿ ಗ್ರಾಮದ ಸಮುದಾಯ ಭವನದ ಸಮೀಪವಿರುವ ನೀಲಮ್ಮ ಎಂಬವರ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದ್ದು, ತಾ. 21 ರಂದು ಬೆಳಿಗ್ಗೆ 9 ಗಂಟೆಗೆ ಉದ್ಯಮಿ ಹರಪಳ್ಳಿ ರವೀಂದ್ರ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ವಹಿಸಲಿದ್ದು, ಪ್ರಮುಖರಾದ ಕೊತ್ನಳ್ಳಿ ಅರುಣ್ ಕುಮಾರ್, ಗಿರೀಶ್ ಮಲ್ಲಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ತಾಕೇರಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಜಿ.ಪಂ. ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್ ಭಾಗವಹಿಸಲಿದ್ದಾರೆ ಎಂದರು.

ಜನಾಂಗದ ಕೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್ (6 ಜನ), ಗದ್ದೆ ಓಟ, ಮಹಿಳೆಯರಿಗೆ ಥ್ರೋಬಾಲ್ (6 ಜನ), ಗದ್ದೆ ಓಟ, ಹಗ್ಗಜಗ್ಗಾಟ ಸ್ಪರ್ಧೆಗಳಿರುತ್ತವೆ. ವಿಜೇತರಿಗೆ ನಗದು ಮತ್ತು ಬಹುಮಾನ ನೀಡಲಾಗುತ್ತದೆ. ತಾ. 18 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7760578902, 9448218525, 9035937237, 9448433294 ಸಂಪರ್ಕಿಸಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಕೆ.ಟಿ. ದಯಾನಂದ, ಖಜಾಂಚಿ ಎಂ.ಪಿ. ರವಿ, ನಿರ್ದೇಶಕ ಗೌಡಳ್ಳಿ ಪೃಥ್ವಿ, ಅಶೋಕ್, ಸದಸ್ಯ ಚೇತನ್ ಉಪಸ್ಥಿತರಿದ್ದರು.