ನಕ್ಸಲ್ ಧಾಳಿ : ಇಬ್ಬರು ಯೋಧರು ಹುತಾತ್ಮ
ರಾಯ್ಪುರ, ಜು. 15: ಛತ್ತೀಸ್ಘಡದಲ್ಲಿ ಮತ್ತೆ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದು, ಎನ್ಕೌಂಟರ್ನಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್ಘಡದ ಕಂಕರ್ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಬಿಎಸ್ಎಫ್ ಸಿಬ್ಬಂದಿ ಎನ್ಕೌಂಟರ್ ನಡೆಸುತ್ತಿದ್ದು, ಬಿಎಸ್ಎಫ್ನ ಮಹ್ಲಾ ಕ್ಯಾಂಪ್ ಇರುವ ಅರಣ್ಯ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆಯುತ್ತಿದೆ. ಇನ್ನು ಎನ್ಕೌಂಟರ್ನಲ್ಲಿ ಇಬ್ಬುರ ಸೇನಾ ಸಿಬ್ಬಂದಿಗಳು ಹತರಾಗಿದ್ದು, ಮತ್ತೋರ್ವ ಸಿಬ್ಬಂದಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಎನ್ಕೌಂಟರ್ ನಡೆಯುತ್ತಿರುವ ಪ್ರದೇಶ ಪಾರ್ತಪುರ್ ಪೆÇಲೀಸ್ ಸರಹದ್ದಿನದ್ದಾಗಿದ್ದು. ಇದೀಗ ಘಟನಾ ಪ್ರದೇಶಕ್ಕೆ ಸ್ಥಳೀಯ ಪೆÇಲೀಸರು ಕೂಡ ದೌಡಾಯಿಸಿದ್ದಾರೆ. ಬಿಎಸ್ಎಫ್ ನ 114ನೇ ಬೆಟಾಲಿಯನ್ ತಂಡ ನಕ್ಸಲರ ವಿರುದ್ಧ ಶೋಧ ಕಾರ್ಯಾರಣೆ ಮುಗಿಸಿ ಕ್ಯಾಂಪ್ಗೆ ವಾಪಸ್ ಆಗುತ್ತಿದ್ದ ವೇಳೆ ನಕ್ಸಲರು ಗುಂಡಿನ ಧಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಮೂಲಗಳ ಪ್ರಕಾರ ನಕ್ಸಲರು ಬಿಎಸ್ಎಫ್ ಕ್ಯಾಂಪ್ ಮೇಲೆಯೇ ನೇರವಾಗಿ ಭಾರಿ ವಿಧ್ವಂಸಕ ಧಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಶಿರಾಡಿ ಘಾಟ್ ವಾಹನ ಸಂಚಾರ ಆರಂಭ
ಮಂಗಳೂರು, ಜು. 15: ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರ 2ನೇ ಹಂತದ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಭಾನುವಾರದಿಂದ ಸಂಚಾರ ಮುಕ್ತಗೊಂಡಿದೆ. ರಸ್ತೆ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತೊಂದು ವಾರ ಕಾಲಾವಕಾಶಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಈಗಾಗಲೇ ಎರಡು ಭಾರೀ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ಮತ್ತಷ್ಟು ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ನಿರಾಕರಿಸಿತ್ತು. ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಿದ್ದರಿಂದಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬರಲು 8-9 ಗಂಟೆಗಳ ಬದಲಾಗಿ 10-11 ಗಂಟೆಗಳ ಕಾಲ ತೆಗೆದುಕೊಳ್ಳುತ್ತಿದೆ. ರಸ್ತೆಯನ್ನು ಮುಕ್ತಗೊಳಿಸುವದರಿಂದ ಸಾವಿರಾರು ಜನರಿಗೆ ಸಹಾಯಕವಾಗಲಿದೆ ಎಂದು ಪಿಡಬ್ಲ್ಯೂಡಿ ಮೂಲಗಳು ಮಾಹಿತಿ ನೀಡಿವೆ.
6 ದಿನ ತಿರುಪತಿ ದೇವಾಲಯ ಬಂದ್
ಆಂಧ್ರಪ್ರದೇಶ, ಜು. 15: ಇದೇ ಮೊದಲ ಬಾರಿಗೆ ಸತತ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್ ಆಗಲಿದ್ದು, ಆಗಸ್ಟ್ 11 ರಿಂದ 16 ವರೆಗೂ ಭಕ್ತಾದಿಗಳಿಗೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಇರುವದಿಲ್ಲ. ಸಮಗ್ರ ಸ್ವಚ್ಛಗೊಳಿಸುವಿಕೆಗಾಗಿ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲನ್ನು ಬಂದ್ ಆಗಲಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ದೇವಾಲಯದಲ್ಲಿ ಅಷ್ಟ ಬಂಧನ ಬಾಲಾಲಯ ಮಹಾ ಸಂಪೆÇ್ರೀಕ್ಷಣೆ ಕಾರ್ಯಕ್ರಮ ನಡೆಯಲಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಈ ಧಾರ್ಮಿಕ ಆಚರಣೆ ನಡೆಯಲಿದೆ. ಪ್ರತಿ 12 ವರ್ಷಗಳಿಗೊಮ್ಮೆ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆಯಾದರೂ ಸಹ ಇದೇ ಮೊದಲ ಬಾರಿಗೆ ಟಿಟಿಡಿ ದೇವಾಲಯದ ಬಾಗಿಲನ್ನು ಮುಚ್ಚುತ್ತಿದೆ. ಈ ಹಿಂದೆ 2006 ರಲ್ಲಿಯೂ ಸಹ ಈ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು ಆದರೆ ಈಗಿನಷ್ಟು ಜನ ಸಂದಣಿ ಇಲ್ಲದೇ ಇದ್ದ ಕಾರಣದಿಂದಾಗಿ ದೇವಾಲಯದ ಬಾಗಿಲನ್ನು ಮುಚ್ಚಿರಲಿಲ್ಲ. ಈಗ ಪ್ರತಿ ದಿನ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ 1 ಲಕ್ಷ ದಾಟಿರುವ ಹಿನ್ನೆಲೆ ಈ ಬಾರಿಯ ಸಂಪೆÇ್ರೀಕ್ಷಣೆ ಕಾರ್ಯಕ್ರಮದಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತಿದೆ. ಎರಡನೆಯದ್ದಾಗಿ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಸಾಲು ಸಾಲು ರಜೆಗಳಿದ್ದು, ದರ್ಶನಕ್ಕೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಸಂಪೂರ್ಣ ಒಂದು ವಾರ ದೇವಾಲಯದ ಬಾಗಿಲನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ಬೆಟ್ಟದ ಮೇಲೆ ತೆರಳುವ ಭಕ್ತಾದಿಗಳಿಗೆ ಆಗಸ್ಟ್ 9 ರಿಂದಲೇ ನಿರ್ಬಂಧ ವಿಧಿಸಲಾಗುತ್ತದೆ.