ಮಡಿಕೇರಿ, ಜು. 15: ಹತ್ತು ವರ್ಷಗಳ ಸತತ ಹೋರಾಟದ ಫಲವಾಗಿ ಪಾಲೇಮಾಡು ಕಾನ್ಯಿರಾಮ್ ನಗರದ ನೂರು ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ನೀಡಿರುವದು ಶ್ಲಾಘನೀಯ ಎಂದಿರುವ ಹೊದ್ದೂರು ಬಹುನ ಕಾರ್ಮಿಕ ಸಂಘದ ನಿವೇಶನ ಹೋರಾಟ ಸಮಿತಿಯ ಪ್ರಮುಖರು, ಉಳಿದಿರುವ 160 ನಿವೇಶನ ರಹಿತ ಕುಟುಂಬಗಳಿಗೂ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ಮೊಹಮ್ಮದ್ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಪಾಲೆಮಾಡು ಪೈಸಾರಿಯಲ್ಲಿ 260 ಕುಟುಂಬಗಳು ನಿವೇಶನ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟವನ್ನು ನಡೆಸುತ್ತಾ ಬಂದಿದ್ದು, ನೂರು ಕುಟುಂಬಗಳಿಗೆ ಇತ್ತೀಚೆಗೆ ಹಕ್ಕು ಪತ್ರ ದೊರೆತ್ತಿದೆ ಎಂದು ಅವರು ತಿಳಿಸಿದ್ದಾರೆ.