ವೀರಾಜಪೇಟೆ, ಜು. 15: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ರೋಟರಿ ಸಂಸ್ಥೆಯ ರೋಟೆರಿಯನ್‍ಗಳು ವೈಯುಕ್ತಿಕವಾಗಿ ತಮ್ಮ ಸಾಮಥ್ರ್ಯ ವನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ ಸಮಾಜದ ಬೇಕು ಬೇಡಿಕೆಗಳಿಗೆ ಸ್ಪಂದಿಸುವಂತಾಗಬೇಕು ಎಂದು ರೋಟರಿ ಸಂಸ್ಥೆಯ ಗವರ್ನರ್ ಎಂ.ಎಂ. ಸುರೇಶ್ ಚಂಗಪ್ಪ ಹೇಳಿದರು.

ವೀರಾಜಪೇಟೆ ರೋಟರಿ ಕ್ಲಬ್‍ನಿಂದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಸಾಲಿನ ಆಡಳಿತ ಮಂಡಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಅವರು ರೋಟೆರಿಯನ್‍ಗಳು ತಾವು ಮಾಡುವ ಸೇವಾ ಕಾರ್ಯಗಳಲ್ಲಿ ನಿಗದಿತ ಗುರಿ ಇಟ್ಟುಕೊಂಡು ಸಮಾಜಸೇವೆಗೆ ಮುಂದಾಗಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಅಸಿಸ್ಟೆಂಟ್ ಗವರ್ನರ್ ಧರ್ಮಪುರ ನಾರಾಯಣ್ ಮಾತನಾಡಿ ರೋಟರಿ ಸಂಸ್ಥೆಯು ಬಾಲ್ಯ ಶಿಕ್ಷಣ ಯೋಜನೆಯನ್ನು ಜಾರಿಗೊಳಿಸಿದ್ದು ಇದರಿಂದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯನ್ನು ಸಮಗ್ರ ರೀತಿಯಲ್ಲಿ ಜಾರಿಗೆ ತರಲು ರೋಟೆರಿಯನ್‍ಗಳು ಪರಸ್ಪರ ಸಹಕರಿಸಬೇಕು ಎಂದು ಹೇಳಿದರು.

ರೋಟರಿ ಸಂಸ್ಥೆಯ ಜೋನಲ್ ಲೆಫ್ಟಿನೆಂಟ್ ರೀಟಾ ದೇಚಮ್ಮ ಮಾತನಾಡಿ ಪದಾಧಿಕಾರಿಗಳು ಸಂಸ್ಥೆಯ ಆಧಾರ ಸ್ತಂಭವಿದ್ದಂತೆ. ಸಮಾಜ ಸೇವೆಗೆ ಅವರ ಶ್ರಮ ಅವಶ್ಯವಾಗಿದೆ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಬೆಂಗಳೂರಿನ ಸಿ.ಇ.ಒ. ಅನರ್ವ ಸಂಸ್ಥೆಯ ಸ್ಥಾಪಕರಾದ ದೇವಿಕಾ ದೇವಯ್ಯ, ಸಂಸ್ಥೆಯ ಹಿಂದಿನ ಸಾಲಿನ ಅಧ್ಯಕ್ಷ ಶಾಂತರಾಮ್ ಕಾಮತ್, ಪ್ರಸ್ತುತ ಸಾಲಿನ ಅಧ್ಯಕ್ಷ ಎಂ.ಎಸ್.ರವಿ ಮಾತನಾಡಿದರು. ಕಾರ್ಯದರ್ಶಿ ಕೆ.ಎಚ್. ಆದಿತ್ಯ ವರದಿ ವಾಚಿಸಿದರು.

ನೂತನ ಸಾಲಿನ ಅಧ್ಯಕ್ಷರಾಗಿ ಎಂ.ಎಸ್. ರವಿ, ಎನ್. ಉಷಾಲತಾ, ಕಾರ್ಯದರ್ಶಿಯಾಗಿ ಬಿ.ಜಿ. ಚೇತನ್ ಮುತ್ತಣ್ಣ, ಖಜಾಂಚಿಯಾಗಿ ಸರೋಜ್ ಕಾರ್ಯಪ್ಪ, ಸಾರ್ಜಂಟ್ ಆಗಿ ಭರತ್ ರಾಮ್ ರೈ, ನಿರ್ದೇಶಕರುಗಳಾಗಿ ಸತೀಶ್ ಗಣಪತಿ, ಎಂ.ಐ. ನಾಣಯ್ಯ, ಡಾ. ಎಂ.ಯು ಚಂಗಪ್ಪ, ಎ.ಎಸ್. ಮಾಚಯ್ಯ, ಎಂ.ಎಂ.ಪೂವಣ್ಣ, ಡಾ: ಎಸ್.ವಿ. ನರಸಿಂಹನ್, ವಿಕಾರ್ ಖಾನ್, ಪಿ.ಎನ್. ಪ್ರಸಾದ್ ಹರಿಶಂಕರ್, ಬಿ.ಸಿ. ಸುಬ್ಬಯ್ಯ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಸಮಾರಂಭಕ್ಕೆ ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಗೋಣಿಕೊಪ್ಪ, ಮಡಿಕೇರಿ, ಮಡಿಕೇರಿಯ ಮಿಸ್ಟಿ ಹಿಲ್ಸ್, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ರೋಟರಿ ಪ್ರತಿನಿಧಿಗಳು ಭಾಗವಹಿಸಿದ್ದರು.