ಗದ್ದೆ ಜಲಾವೃತ: ಕದನೂರುವಿನ 4ಮೈಲ್ ನಿವಾಸಿ ಪೂಳಂಡ ಕುಟುಂಬಸ್ಥರ ಗದ್ದೆಗಳು ಜಲಾವೃತಗೊಂಡಿರುವ ನೋಟ ಗೋಚರಿಸಿದೆ. ಕಕ್ಕಬೆ ಕ್ಲಬ್ ಮೂಲಕ ಹಾದುಹೋಗುವ ವೀರಾಜಪೇಟೆ ಮುಖ್ಯರಸ್ತೆಯಲ್ಲಿ ನಡೆಯಲಾಗದ ಪರಿಸ್ಥಿತಿ ಎದುರಾಗಿದ್ದು, ಸಂಬಂಧಿಸಿದ ಇಲಾಖೆ ಸೂಕ್ತ ಗಮನಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ನಡೆಯುವ ದಾರಿಯ ಅವ್ಯವಸ್ಥೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
- ನವೀನ್ ಎನ್.ಸಿ.ಮರಬಿದ್ದು ಅಡಚಣೆ: ಚೆಟ್ಟಳ್ಳಿ, ಸುಂಟಿಕೊಪ್ಪ ರಸ್ತೆಯ ಕಂಡಕೆರೆಯ ಬಸ್ ತಂಗುದಾಣದ ಮೇಲೆ ಮರ ಬಿದ್ದು, ಸಂಚಾರ ಸ್ಥಗಿತಗೊಂಡಿದ್ದು, ವಿವಿಧ ಇಲಾಖೆಯಿಂದ ತೆರವುಗೊಳಿಸಿ ಸಂಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ.
- ಇಸ್ಮಾಯಿಲ್ ಕಂಡಕೆರೆರಸ್ತೆ ಸಂಚಾರ ಬಂದ್: ಮುಕ್ಕೋಡ್ಲು ಹಮ್ಮಿಯಾಲ ರಸ್ತೆ ಭೂಕುಸಿತದಿಂದ ಬಂದಾಗಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದೆ 3 ದಿನಗಳಾಗಿವೆ.
- ತಡಿಯಪ್ಪನ ಕುಶಾಲಪ್ಪರಸ್ತೆ ಸಂಚಾರ ಬಂದ್: ಮುಕ್ಕೋಡ್ಲು ಹಮ್ಮಿಯಾಲ ರಸ್ತೆ ಭೂಕುಸಿತದಿಂದ ಬಂದಾಗಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದೆ 3 ದಿನಗಳಾಗಿವೆ.
- ತಡಿಯಪ್ಪನ ಕುಶಾಲಪ್ಪಭೂಕುಸಿತ: ಮಡಿಕೇರಿಯ ಸುಬ್ರಹ್ಮಣ್ಯ ನಗರದ ಕಾರ್ತಿಕ ರಸ್ತೆಯ ನಿವಾಸಿ ಜಾನಕಿ ಎಂಬವರ ಮನೆಯ ಎದುರು ಭೂಕುಸಿತಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿದೆ. ಇನ್ನಷ್ಟು ಕುಸಿದರೆ ಎದುರಿಗಿರುವ ತೋಡು ಮುಚ್ಚಿಹೋಗುವ ಸಂಭವವಿದೆ.ತಡೆಗೋಡೆ ಕುಸಿತ: ಮಳೆಯಿಂದ ತಡೆಗೋಡೆ ಬಿದ್ದು, ತಾತಿಬಾಣೆ ಪೈಸಾರಿಯ ಬಾಬು ಎಂಬವರ ಮನೆ ಅಪಾಯದಂಚಿನಲ್ಲಿದೆ.
-ಬಾಲಕೃಷ್ಣ ರೈ ಬಿ.ಎ., ಅಧ್ಯಕ್ಷರು, ಕೆದಕಲ್ ಪಂಚಾಯಿತಿ