ಮಡಿಕೇರಿ, ಜು. 16: ತಾ. 17ರಂದು (ಇಂದು) ಮಧ್ಯಾಹ್ನ 3.30 ಗಂಟೆಗೆ ನಗರ ಚೇಂಬರ್ ಆಫ್ ಕಾಮರ್ಸ್ ಸಮಿತಿ ವತಿಯಿಂದ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಪರ್ಯಾಯ ಚಿಂತನೆ, ಬಳಕೆಯ ಪರ್ಯಾಯ ವ್ಯವಸ್ಥೆಯಾಗಿ ವರ್ತಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬಗ್ಗೆ ನಗರಸಭೆ ಸಹಯೋಗದೊಂದಿಗೆ, ಸಿ.ಸಿ. ಕ್ಯಾಮರಾ ಅಳವಡಿಕೆ ಹಾಗೂ ಇತರ ವಿಷಯಗಳ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಆಯುಕ್ತರು, ನಗರಸಭೆ ಅಧ್ಯಕ್ಷರು, ತಾಲೂಕು ಪೊಲೀಸ್ ಉಪ ಅಧೀಕ್ಷಕ ಸುಂದರ್‍ರಾಜ್ ಹಾಗೂ ವೃತ್ತ ನಿರೀಕ್ಷಕರು ಅವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಚೇಂಬರ್ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.