ನಾಪೆÉÇೀಕ್ಲು, ಜು. 16: ತಾ. 14 ರಂದು ಹಳೆ ತಾಲೂಕಿನಲ್ಲಿ ವಿದ್ಯುತ್ ಶಾರ್ಟ್ ಸಕ್ಯೂರ್ಟ್‍ನಿಂದ ಸುಮಾರು 20 ಮನೆಗಳಿಗೆ ಹಾನಿಯಾಗಿದ್ದು ಇದಕ್ಕೆ ಚೆಸ್ಕಾಂ ಇಲಾಖೆಯೇ ನೇರ ಕಾರಣವಾಗಿದೆ ಎಂದು ರಾಜ್ಯ ಜೆ.ಡಿ.ಎಸ್. ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಆರೋಪಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಹಳೆ ವಿದ್ಯುತ್ ಲೈನ್ ಮೇಲ್ಭಾಗದಲ್ಲಿ ನೂತನವಾಗಿ ಏಕ್ಸ್‍ಪ್ರೆಸ್ ವಿದ್ಯುತ್ ಲೈನ್ ಅಳವಡಿಸಿರುವದೇ ಅಗ್ನಿ ದುರಂತಕ್ಕೆ ಕಾರಣವಾಗಿದೆ. ಇದರಿಂದ 20 ಮನೆಗಳಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕದ ವಿದ್ಯುತ್ ಉಪಕರಣಗಳು ನಷ್ಟವಾಗಿವೆ. ಇಷ್ಟಾದರೂ ಚೆಸ್ಕಾಂ ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ ಎಂದು ದೂರಿದರು. ಈ ವಿಭಾಗದಲ್ಲಿ ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯ ಜನರು ಮತ್ತು ಅಲ್ಪ ಸಂಖ್ಯಾತರ ಮನೆಗಳು ಹೆಚ್ಚಾಗಿದ್ದು, ಕೂಡಲೇ ಚೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಪರಿಶೀಲಿಸಿ ಪರಿಹಾರ ನೀಡಲು ಕ್ರಮಕೈಗೊಳ್ಳದಿದ್ದರೆ ಮುಖ್ಯ ಮಂತ್ರಿಗಳಿಗೆ ದೂರು ನೀಡಲಾಗುವದು ಎಂದು ಎಚ್ಚರಿಸಿದ್ದಾರೆ. ಗೋಷ್ಠಿಯಲ್ಲಿ ಯುವ ಜನತಾ ದಳ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಇಬ್ರಾಹಿಂ, ಸ್ಥಳಿಯರಾದ ಬಿ.ಕೆ. ಹಾರಿಶ್ ಇದ್ದರು.