ಮಡಿಕೇರಿ, ಜು. 16: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಸ್ಪಿಕ್ ಮೆಕೆ ಕೊಡಗು ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪದ್ಮಶ್ರೀ ಉಸ್ತಾದ್ ವಾಸೀಫುದ್ದೀನ್ ದಾಗರ್ ಅವರಿಂದ ದ್ರುಪದ್ ಕಾರ್ಯಕ್ರಮ ಜರುಗಿತು.

ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಆಯೋಜಿತವಾಗಿದ್ದ ದ್ರುಪದ್ ಸಂಗೀತ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಕಲಾ ಪ್ರೇಮಿಗಳು ವೀಕ್ಷಿಸಿ ವಿಭಿನ್ನ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಆಸ್ವಾದಿಸಿದರು. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಾರ್ಯದರ್ಶಿ ಬಾಲಾಜಿಕಶ್ಯಪ್, ಡಾ.ಎಂ.ಜಿ.ಪಾಟ್ಕರ್ ಪಾಲ್ಗೊಂಡಿದ್ದರು. ನಯನ ಕಶ್ಯಪ್ ನಿರೂಪಿಸಿದರು.