ಮಡಿಕೇರಿ, ಜು. 16: ಮಡಿಕೇರಿಯ ಕ್ಯಾಪಿಟಲ್ ಹಾಲ್‍ನಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರುಗಳಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಸಂಘದ ಅಧ್ಯಕ್ಷ ಎನ್.ಕೆ. ಪ್ರಭು ಅಧ್ಯಕ್ಷತೆ ವಹಿಸಿದ್ದರು. ಚೆಟ್ಟಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಎಸ್. ಕೇಶವ ಹಾಗೂ ಬೆಟ್ಟಗೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ. ದೇವಕಿ ಇವರನ್ನು ಸದ್ರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಕೆ. ಕುಮಾರ್, ಎಂ. ಗಣೇಶ್, ವಿಜಯಕುಮಾರ್, ಪುಟ್ಟಸ್ವಾಮಿ, ಸೀತಾ, ಬಿ.ಎಂ. ವಿಜಯ್, ನಿರ್ದೇಶಕರು ಹಾಗೂ ಸಂಘದ ಮಾಜಿ ಅಧ್ಯಕ್ಷ ಕೆ.ಜಿ. ಗೋಪಾಲ್ (ನಿ) ಭಾಗವಹಿಸಿದ್ದರು.