ವೀರಾಜಪೇಟೆ, ಜು. 16: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ ದಾಖಲೆಯ 35,29,608.15 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮೂಕೊಂಡ ಸಿ.ಅಯ್ಯಪ್ಪ ತಿಳಿಸಿದ್ದಾರೆ. ವಾರ್ಷಿಕ ಮಹಾಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘÀವು ರೈತರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಈಗಾಗಲೇ ಹಾಕಿಕೊಂಡಿದೆ. ನವ ಪೀಳಿಗೆಯ ಕೃಷಿಕರನ್ನು ಸಂಘದ ಸದಸ್ಯರನ್ನಾಗಿಸಿ ಸಂಘದ ಬಲವರ್ಧನೆ, ರೈತರಿಗೆ ಅಗತ್ಯದ ಮಾಹಿತಿಗಳನ್ನು ಏಕಕಾಲದಲ್ಲಿ ಆನ್‍ಲೈನ್ ಮೂಲಕ ಮೊಬೈಲ್ ದೂರವಾಣಿಗೆ ರವಾನಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಮಾತ್ರವಲ್ಲ, ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ಕೃಷಿಕರೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಮಾಹಿತಿ ಜಾಲವನ್ನು ನಿರ್ಮಿಸಲಾಗುವದು ಎಂದರು.

ಸದಸ್ಯರುಗಳಿಗೆ ವಿವಿಧ ಸಾಲಗಳ ವಿತರಣೆಯಾಗಿದ್ದು. ಇವುಗಳ ಪೈಕಿ ಶೇ. 92ರಷ್ಟು ವಸೂಲಾತಿ ಆಗಿದೆ. ಸದಸ್ಯರುಗಳಿಗೆ ಶೇ.20 ಡಿವಿಡೆಂಟ್ ಹಣ ನೀಡಲಾಗುತ್ತಿದ್ದು. ಕಳೆದ 11 ವರ್ಷಗಳಿಂದ ಲೆಕ್ಕ ಪತ್ರ ನಿರ್ವಹಣೆ ,್ತ ಸಾಲ ವಸೂಲಾತಿಯಲ್ಲಿ ಹಾಗೂ ಆಡಿಟ್ ವರ್ಗೀಕರಣದಲ್ಲಿ ‘ಎ’ ಹಂತವನ್ನು ಕಾಪಾಡಿಕೊಂಡು ಬರಲಾಗಿದೆ. ಸಂಘದ ವ್ಯಾಪ್ತಿಗೆ ಬರುವ ಕಾವಾಡಿ, ಕುಂಬೇರಿ, ಅಮ್ಮತ್ತಿ, ಪುಲಿಯೇರಿ, ಬಿಳುಗುಂದ, ನಲ್ವತೊಕ್ಲು, ಹೊಸ್ಕೋಟೆ ಗ್ರಾಮಗಳ ಕೃಷಿಕರಿಗೆ ಅಲ್ಪಾವಧಿ , ಮಧ್ಯಮಾವಧಿ ಹಾಗೂ ವಾಹನ ಸಾಲದ ಸೌಲಭ್ಯ ಒದಗಿಸಿ ಕೃಷಿಕರ ಸರ್ವತೋಮುಖ ಅಭಿವೃದ್ದಿಗೆ ಸಂಘವು ಕಾರಣವಾಗಿದೆ ಎಂದರು”. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಕುಟ್ಟಂಡ ವಿನು ಪೂವಯ್ಯ, ನಿರ್ದೇಶಕರುಗಳಾದ ಐನಂಡ ಲಾಲಾ ಅಯ್ಯಣ್ಣ, ಎಂ. ಎನ್. ಚಿಣ್ಣಪ್ಪ, ಎನ್. ಬಿ. ದೇವಯ್ಯ, ಎಂ ಡಿ. ಯೋಗೀಶ್, ಎಂ. ಎಂ. ಉತ್ತಪ್ಪ, ಎಂ. ಎ. ಸಂತೋಷ್, ಠವಿ ನಾಚಪ್ಪ, ಕೆ. ಟಿ. ಆಶಾ ಪೊನ್ನಮ್ಮ, ಹೆಚ್. ಕೆ. ಸಿಂಗ್ರಯ್ಯ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎಸ್.ವಿ.ನಾರಾಯಣ, ನೂತನ ಕಾರ್ಯನಿರ್ವಹಣಾಧಿಕಾರಿ ಮೊಳ್ಳೇರ ರಜನಿ ಹಾಜರಿದ್ದರು.