ಕೂಡಿಗೆ, ಜು. 16: ಕೇಂದ್ರ ಸರ್ಕಾರದ ಸ್ಪಚ್ಛ ಭಾರತ ಅಭಿಯಾನದಡಿ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದಂತೆ ಬೆಂಗಳೂರು ಸಾಯಿ ವಿದ್ಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಂದ ಕೂಡುಮಂಗಳೂರು ಗ್ರಾಮಪಂಚಾಯಿತಿ ಆವರಣದಲ್ಲಿ ಸ್ಪಚ್ಛತಾ ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರಪೇಟೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಸುನಿಲ್ ನೆರವೇರಿಸಿದರು.

ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಶೌಚಾಲಯವನ್ನು ನಿರ್ಮಾಣ ಮಾಡುವದರ ಮೂಲಕ ಹೆಚ್ಚು ಶುಚಿತ್ವಗೆ ಒತ್ತು ನೀಡಿವೆ ಎಂದರು. ಸಂಸ್ಥೆಯ ನೋಡಲ್ ಅಧಿಕಾರಿ ಹರೀಶ ಮಾತನಾಡಿ, ಸಭೆಗೆ ಮಾಹಿತಿ ನೀಡಿದರು.

ಸಭೆಯ ಅಧÀ್ಯಕ್ಷತೆಯನ್ನು ಕೂಡುಮಂಗಳೂರು ಗ್ರಾಮಪಂಚಾಯಿತಿ ಅಧÀ್ಯಕ್ಷೆ ಲಕ್ಷ್ಮಿ ವಹಿಸಿದ್ದರು. ಉಪಾಧÀ್ಯಕ್ಷ ಕೆ.ವಿ ಸಣ್ಣಪ್ಪ ಸದ್ಯಸರಾದ ಮಂಜುನಾಥ, ಕೂಡುಮಂಗಳೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷ, ಮುಳ್ಳುಸೋಗೆ ಅಧಿಕಾರಿ ರಾಜಶೇಖರ್, ಕೂಡಿಗೆ ಸ್ವಾಮಿನಾಯಕ, ಗುಡ್ಡೆಹೊಸೂರು ಪ್ರಸನ್ನ ಸೇರಿದಂತೆ ಸಂಸ್ಥೆಯ ಕಾರ್ಯದರ್ಶಿ ಮಾದಪ್ಪ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.