ಸುಂಟಿಕೊಪ್ಪ, ಜು. 16: ಸುಂಟಿಕೊಪ್ಪ, ನಾಕೂರು-ಶಿರಂಗಾಲ, ಕೊಡಗರಹಳ್ಳಿ, 7ನೇ ಹೊಸಕೋಟೆ, ಕಂಬಿಬಾಣೆ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.

ಸುಂಟಿಕೊಪ್ಪದ ಅಂಬೇಡ್ಕರ್ ಭವನದಲ್ಲಿ ಸಂಜೀವಿನಿ ಕರ್ನಾಟಕ ಏಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಮಹಿಳೆಯ ಸಬಲೀಕರಣದ ಉದ್ದೇಶದಿಂದ ನಡೆಸಲಾಯಿತು.

ಹೊಲಿಗೆ, ಮೊಬೈಲ್ ದುರಸ್ತಿ ತರಬೇತಿ, ವ್ಯಾಪಾರ, ಉದ್ದಿಮೆ, ಕಸೂತಿ ಸೇರಿದಂತೆ ಉದ್ಯಮ ಕೌಶಲ್ಯವನ್ನು ತಿಳಿಸಿಕೊಡುವ ಈ ಕಾರ್ಯಕ್ರಮದ ಪ್ರಯೋಜನವನ್ನು ಈ ವಿವಿಧ ಗ್ರಾಮ ಪಂಚಾಯಿತಿಗಳಿಂದ ಆಗಮಿಸಿದ್ದ ಸ್ತ್ರೀ ಶಕ್ತಿ ಸಂಘ ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಸದುಪಯೋಗ ಪಡಿಸಿಕೊಂಡರು.

ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಪಿಡಿಓ ಮೇದಪ್ಪ, ಕೊಡಗರಹಳ್ಳಿ ಪಿಡಿಓ ನಂದೀಶ್, ಕಂಬಿಬಾಣೆ ಪಿಡಿಓ ಗಿರೀಶ್, 7ನೇ ಹೊಸಕೋಟೆ ಪಿಡಿಓ ಆಸ್ಮಾ, 7ನೇಹೊಸಕೋಟೆ ಗ್ರಾ.ಪಂ. ಅಧ್ಯಕ್ಷೆ ಸುಮಲತಾ, ನಾಕೂರು-ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಪಂಚಾಯಿತಿ ಸದಸ್ಯರುಗಳಾದ ಎ. ಶ್ರೀಧರ್ ಕುಮಾರ್, ನಾಗರತ್ನ ಸುರೇಶ್ ಹಾಗೂ ಪಂಚಾಯಿತಿ ಕಾರ್ಯದರ್ಶಿ, ಸಿಬ್ಬಂದಿಗಳು ಸ್ತ್ರೀ ಶಕ್ತಿ ಸಂಘ, ಸ್ವ ಸಹಾಯ ಸಂಘದ ಪದಾಧಿಕಾರಿಗಳು ಇದ್ದರು.