ಸೋಮವಾರಪೇಟೆ, ಜು.16:ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಅಮಾಯಕ ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಹೇಳಿಕೆಯನ್ನು ಪಡೆಯುತ್ತಿರುವದು ಖಂಡನೀಯ ಮತ್ತು ಕರ್ನಾಟಕ ಸರ್ಕಾರ ಹಜ್ ಭವನಕ್ಕೆ ಟಿಪ್ಪು ಜಯಂತಿ ಹೆಸರನ್ನು ಇಡಲು ಕೈಗೊಂಡಿರುವ ನಿರ್ಣಯವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನದ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿಂದೂ ಜನ ಜಾಗೃತಿ ಸಮಿತಿಯ ಸಮನ್ವಯಾಧಿಕಾರಿ ಶಿವರಾಂ ಮಾತನಾಡಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮಾಯಕ ಯುವಕರನ್ನು ಬಂಧಿಸಿ ರಾಜಕೀಯ ಲಾಭಗಳಿಸಲು ಯತ್ನಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆ ತನಿಖೆಯನ್ನು ಮೂಲೆ ಗುಂಪು ಮಾಡಲಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆಯ ತನಿಖೆಯನ್ನು ಉನ್ನತಮಟ್ಟದ ತನಿಖೆಗೆ ವಹಿಸಬೇಕು. ಅಲ್ಲದೆ, ಕರ್ನಾಟಕ ಹಜ್ ಭವನÀಕ್ಕೆ ಹಿಂದೂಗಳ ಮೇಲೆ ಅಪರಿಮಿತ ಅತ್ಯಾಚಾರ ಮಾಡಿ, ಹತ್ಯೆಗೈದಿರುವ ಟಿಪ್ಪುವಿನ ಹೆಸರನ್ನಿಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಇಲ್ಲಿನ ತಾಲೂಕು ತಹಸೀಲ್ದಾರ್ ಮೂಲಕ ರಾಜ್ಯಪಾಲರು, ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ. ಮಧು, ಸಂತೋಷ್, ಲಕ್ಷ್ಮೀಶ, ಸೋಮೇಶ, ರಮೇಶ್, ತಾಕೇರಿ ಗಣೇಶ್, ಮಸಗೋಡು ವಿಜಯ, ಕೊಡ್ಲಿಪೇಟೆ ಗಗನ್ ಮತ್ತಿತರರು ಉಪಸ್ಥಿತರಿದ್ದರು.