ರಸ್ತೆಗೆ ಮಣ್ಣು: ಮಡಿಕೇರಿ-ಮಂಗಳೂರು ರಸ್ತೆಯ ತಾಳತ್‍ಮನೆಯಲ್ಲಿರುವ ದುರ್ಗಾಭಗವತಿ ಬಡಾವಣೆಯ ಮನೆಯಲ್ಲಿ ಹೋಂಸ್ಟೇ ನಡೆಸುತ್ತಿದ್ದು, ಕುಸಿದ ಮಣ್ಣನ್ನು ಸುರಿದಿದ್ದು, ಇದರಿಂದ ಸಾರ್ವಜನಿಕರು ನಡೆದಾಡಲು ಕಷ್ಟವಾಗಿದೆ. ಸಂಬಂಧಿಸಿದವರು ಗಮನ ಹರಿಸಲು ಕೋರಿಕೆ. - ತಮ್ಮಿಸ್ಮಶಾನಕ್ಕೆ ಹಾನಿ: ಮಡಿಕೇರಿಯ ಚೈನ್‍ಗೇಟ್ ಬಳಿ ಇರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಮಳೆ-ಗಾಳಿಯಿಂದ ಹಾನಿಯುಂಟಾಗಿದ್ದು, ಮೇಲ್ಛಾವಣಿ ಹಾರಿ ಹೋಗಿದೆ. - ಪಿ.ಎಂ. ರವಿಬಡಾವಣೆ ಜಲಾವೃತ: ಮಡಿಕೇರಿಯ ಕನ್ನಿಕಾ ಬಡಾವಣೆಯಲ್ಲಿ ಮಳೆಯಿಂದಾಗಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.
- ಸೋನಾ ಪ್ರೀತುಅರಮನೆಗೆ ಹಾನಿ: ಮಡಿಕೇರಿಯ ಐತಿಹಾಸ ಪ್ರಸಿದ್ಧ ಕೋಟೆ ಅಳಿವಿನಂಚಿನಲ್ಲಿದೆ. ಸರಕಾರದ ಯಾವದೇ ಇಲಾಖೆ ನಿರ್ವಹಣೆಗೆ ಮುಂದಾಗದಿರುವದು ವಿಷಾದನೀಯ. ಸುಂದರ ಅರಮನೆ ನೆಲಸಮವಾಗುವ ಕ್ಷಣ ದೂರವಿಲ್ಲ. ಭವಿಷ್ಯದಲ್ಲಿ ಮಾದರಿ ಕೋಟೆಯನ್ನು ಮಾಡಿ ಪ್ರದರ್ಶನಕ್ಕೆ ಇಡಬೇಕಾದೀತು. - ಬಿ.ವಿ. ದೀಕ್ಷಿತ್ ರೈ.ರಸ್ತೆಯಲ್ಲಿ ಸರ್ವಿಸ್: ಬಲಮುರಿಯ ಬಳಿಯ ಒಳ್ಳೆತೋಡು ಬಳಿ ರಸ್ತೆ ಮೇಲೆ ನದಿ ನೀರು ಹರಿಯುತ್ತಿದ್ದು, ಬೈಕ್ ಸವಾರರು ಇದನ್ನೇ ಸರ್ವಿಸ್ ಸ್ಟೇಷನ್ ಮಾಡಿಕೊಂಡಿದ್ದಾರೆ. - ನೌಷದ್, ಪಾಲೇಮಾಡಿಶೀಟುಗಳಿಗೆ ಹಾನಿ: ಮರಗೋಡು ಬಳಿಯ ಹೊಸ್ಕೇರಿಯಲ್ಲಿ ಭಾರೀ ಗಾಳಿ-ಮಳೆಯಿಂದಾಗಿ ಮನೆಯ ಹಿಂಬದಿ ಹಾಕಲಾಗಿದ್ದ ಶೀಟುಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ. - ಸದಾ ಮುಕ್ಕಾಟಿ