ಮಡಿಕೇರಿ, ಜು. 18: ಮಡಿಕೇರಿಯ ಉತ್ಸಾಹಿ ಯುವಕರ ತಂಡದಿಂದ ನಿರ್ಮಾಣವಾದ, ವಿನಯ್ ಕುಮಾರ್ ನಿರ್ದೇಶನದ ಕಿರುಚಿತ್ರ “ಜಟಾಯು ಲವ್ ಪೊಲಿಟಿಕ್ಸ್” ಇತ್ತೀಚೆಗೆ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ಬಿಡುಗಡೆಗೊಂಡಿತು. ಕಿರುಚಿತ್ರವನ್ನು ಸ್ಯಾಂಡಲ್ ವುಡ್ ನಟ, ನಿರ್ಮಾಪಕ ಮಿತ್ರ ಬಿಡುಗಡೆ ಮಾಡಿದರು.
ಉದ್ಯಮಿ ಐತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಕಿಂಗ್ಸ್ ಆಫ್ ಕೂರ್ಗ್ನ ಮಾಲೀಕರಾದ ಮಹೇಶ್, ರವಿ ಮೊಗೇರ, ಬಿಗ್ ಬಾಸ್ ಖ್ಯಾತಿಯ ಮೇಘ ಅತಿಥಿಗಳಾಗಿ ಹಾಜರಿದ್ದರು.