ಮಡಿಕೇರಿ, ಜು. 18: ಕಾಫಿ ಮಂಡಳಿಯು ಸಮಗ್ರ ಕಾಫಿ ಅಭಿವೃದ್ಧಿ ಯೋಜನೆಯಲ್ಲಿ ಮಧ್ಯಂತರ ಅವಧಿಯ ಚೌಕಟ್ಟಿನಲ್ಲಿ ಹೊಸ ಕಾರ್ಯಕ್ರಮಗಳಾದ ಕಾಫಿ ಮರು ನಾಟಿ, ಜಲಸಂವರ್ಧನೆ, ಪರಿಸರ ಪ್ರಮಾಣೀಕರಣ ಹಾಗೂ ಮಾರುಕಟ್ಟೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಈ ಕಾರ್ಯಕ್ರಮಗಳು ತಾ. 13.7.2018 ರಿಂದ 31.3.2020 ರವರೆಗೆ ಚಾಲ್ತಿಯಲ್ಲಿದ್ದು, ಸಣ್ಣ ಬೆಳೆಗಾರರು ಅಂದರೆ 25 ಎಕರೆವರೆಗಿನ ಹಿಡುವಳಿದಾರರಿಗೆ ಅನ್ವಯಿಸುತ್ತದೆ. ಈ ಯೋಜನೆಯಲ್ಲಿ ಹೊಸ ಫಲಾನುಭವಿಗಳಿಗೆ ಮೊದಲ ಆದ್ಯತೆ ಕೊಡುವದರಿಂದ ಅರ್ಹ ಕಾಫಿ ಬೆಳೆಗಾರರು ಸಮೀಪದ ಕಾಫಿ ಮಂಡಳಿಯ ಕಚೇರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೋರಲಾಗಿದೆ.