ಮಡಿಕೇರಿ, ಜು. 18: ಮಡಿಕೇರಿ ತಾಲ್ಲೂಕಿನ ಕೋಡಂಬೂರು ಗ್ರಾಮದ ನಿವಾಸಿ ಬಾದುಮಂಡ ಕೆ. ಸುಬ್ಬಯ್ಯ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪಂಜರಿ ಎರವರ ಕಾಳ (60) ಜು. 17 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದು, ಜು. 18 ರಂದು ಬೆಳಗ್ಗೆ ಕೆಲಸಕ್ಕೆ ಬಾರದ ಕಾರಣ ಹೋಗಿ ನೋಡಿದಾಗ ಮಲಗಿದಲ್ಲಿಯೇ ಮೃತಪಟ್ಟಿರುವದು ಕಂಡು ಬಂದಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮೃತ ಕಾಳನ ವಾರಸುದಾರರು ತಿಳಿದು ಬಂದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂರ್ಪಕಿಸಬಹುದಾಗಿದೆ ಎಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಬಾದುಮಂಡ ಕೆ. ಸುಬ್ಬಯ್ಯ: 9481278414, ಮಡಿಕೇರಿ ಗ್ರಾ. ಠಾಣೆ: 08272-228777, 94808 04946.