ಮಡಿಕೇರಿ, ಜು. 18 : ಬೆಲ್ಜಿಯಂನ ಅಂಟ್ವರ್ಪ್ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳೆಯು 6 ರಾಷ್ಟ್ರಗಳ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಆಟಗಾರ್ತಿ ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿರುವ ಮಲ್ಲಮಾಡ ಲೀಲಾವತಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಂದ್ಯಾವಳಿ ತಾ. 23ರವರೆಗೆ ನಡೆಯಲಿದೆ ಎಂದು ಸಾಯಿ ಸಹಾಯಕ ನಿರ್ದೇಶಕ ಎನ್.ಎಸ್. ರವಿ ತಿಳಿಸಿದ್ದಾರೆ.