ಮಳೆಗಾಲಯದಲ್ಲಿ ಫೋಟೋಗ್ರಫಿಯ ಮಜಾನೇ ಬೇರೆ. ಕೊಡಗಿನಲ್ಲೀಗ ಮಳೆಗಾಲದ ಸಮಯವಾದ್ದರಿಂದ ಒಂದೆಡೆ ನದಿ, ತೊರೆ, ತೋಡುಗಳು ಹಾಲಿನ ನೊರೆಯಂತೆ ತುಂಬಿ ಹರಿದರೆ ಮತ್ತೊಂದೆಡೆ ಭೂಮಿ ಹಸಿರುಟ್ಟ ಭೂತಾಯಿಯಂತೆ ಕÀಂಗೊಳಿಸುತ್ತಿದೆ. ಇಂತಹ ಸಮಯವೇ ಫೋಟೋಗ್ರಫಿಗೆ ಸೂಕ್ತ ಸಮಯವೆಂದು ಹವ್ಯಾಸಿ ಛಾಯಾಗ್ರಾಹಕರ ಮಾತಿದೆ.

ಉತ್ತಮ ಫೋಟೋಗ್ರಫಿಗಳು ಕ್ಯಾಮರಾದೊಳಗೆ ಸೆರೆಯಾಗ ಬೇಕೆಂದರೆ ಮಳೆ-ಗಾಳಿ, ಚಳಿಯನ್ನು ಲೆಕ್ಕಿಸದೆ ಕ್ಯಾಮರಾದ ಪರಿಕರಗಳನ್ನು ಮಳೆಯ ನಡುವೆ ಎಂಜಾಯ್ ಮಾಡುತ್ತಾ ಮಳೆಯ ಬಿಡುವಿನ ನಡುವೆ ಕ್ಲಿಕ್ಕಿಸಿ ಮಜಾ ಪಡೆಯುವ ಅದೆಷ್ಟೋ ಹವ್ಯಾಸಿ ಫೋಟೋಗ್ರಾಫರ್‍ಗಳಿದ್ದಾರೆ. ಆದರೆ ಅನೇಕ ಫೋಟೋ ಕ್ಲಿಕ್ಕಿಸಿದರೂ ಕೊನೆಗೆ ಉತ್ತಮ ಫೋಟೋಗಳೆನಿಸಿಕೊಳ್ಳುವದು ಕೇವಲ ನಾಲ್ಕೊ-ಐದೊ ಮಾತ್ರವೆ.

ಹಿಂದಿನ ಕಾಲದಲ್ಲಿ ಫೋಟೋ ತೆಗೆದು ಸ್ಟುಡಿಯೋ ಲ್ಯಾಬ್‍ಗಳಲ್ಲಿ ವಾಶ್ ಮಾಡಿಸಿ ನೋಡ ಬೇಕಿದ್ದ ಪರಿಸ್ಥಿತಿಯಾದರೆ ಕ್ಲಿಕಿಸಿದಾಕ್ಷಣವೇ ಕಣ್ಣ ಮುಂದೆಯೇ ನೋಡಬಹುದಾದ ಟೆಕ್ನಾಲಜಿಗಳು ಇಂದು ಬಂದಿವೆ. ಅಂದು ಪುಟ್ಟ ಪುಟ್ಟ ಕ್ಯಾಮರಾಗಳನ್ನು ಹಿಡಿದವರು ಇಂದು ಸಾವಿರದಿಂದ ಲಕ್ಷಗಟ್ಟಲೆ ಬೆಲೆಬಾಳುವ ಹಲವು ಕಂಪೆನಿಗಳ ಡಿಎಸ್‍ಎಲ್‍ಆರ್ ಹಾಗೂ ಎಸ್‍ಎಲ್‍ಆರ್‍ಗಳ ಮೂಲಕ ಫೋಟೋಗ್ರಫಿಗಳಲ್ಲಿ ಆನ್‍ಲೈನ್ ವೆಬ್‍ಸೈಟ್‍ಗಳಲ್ಲಿ ರಾಪ್ಟ್ರೀಯ ಮಟ್ಟದಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲಿ ಫೊಟೋಗ್ರಾಫರ್‍ಗಳಾಗುವಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ಅದೇ ರೀತಿ ಕೊಡಗಿನಲ್ಲಿ ಫೋಟೋಗ್ರಫಿಗಳೇನು ಕಮ್ಮಿ ಇಲ್ಲ. ಪುರುಷರು-ಮಹಿಳೆಯರು, ಮಕ್ಕಳೆಂಬಂತೆ ಫೋಟೋಗ್ರಫಿಗಳ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿರುವದು ಕಂಡುಬರತೊಡಗಿದೆ. ಮಳೆಗಾಲದಲ್ಲಂತೂ ಫೋಟೋಗ್ರಫಿ ಮಾಡಲು ಕೊಡಗಿನ ಪರಿಸರವೇ ಹೇಳಿಮಾಡಿಸಿದಂತಿದೆ. ಪತ್ರಕರ್ತರು, ಮಾಧ್ಯಮದವರು ರಮಣಿಯ ಪರಿಸರವನ್ನು ಸೆರೆ ಹಿಡಿದು ಪ್ರಚಾರ ಪಡಿಸಿದರೆ, ಅದೆಷ್ಟೋ ಕ್ಯಾಮರಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಹವ್ಯಾಸಿ ಫೋಟೋಗ್ರÀಫರ್‍ಗಳು ಫೇಸ್‍ಬುಕ್, ವಾಟ್ಸ್‍ಆಪ್‍ಗಳಲ್ಲೆಲ್ಲ ಮಳೆಗಾಲದ ಫೋಟೋಗ್ರಫಿಗಳನ್ನು ಹರಿಯಬಿಡುತ್ತಾ ಕೊಡಗಿನ ಮಳೆÉಗಾಲವನ್ನು ಎಂಜಾಯ್ ಮಾಡುವ ಮೂಡಿನಲ್ಲಿ ಲೈಕ್ಸ್ ಹಾಗೂ ಕಮೆಂಟ್ಸ್‍ಗಳನ್ನು ಮಾಡುತ್ತಿರುತ್ತಾರೆ. ಈಗಿನ ಮೊಬೈಲ್‍ಗಳು ಕೂಡ ಪುಟ್ಟಕಣ್ಣಿನ ಕ್ಯಾಮರಾಗಳನ್ನು ಹೊಂದಿದ್ದು, ಉತ್ತಮ ಫೋಟೋಗಳನ್ನು ಹೊಂದಲು ಸಾಧ್ಯವಿದ್ದು, ಮಳೆಗಾಲದಲ್ಲಂತೂ ಸೆಲ್ಫಿಗಳನ್ನು ತೆಗೆಯುವರಿಗೇನು ಕಮ್ಮಿ ಇಲ್ಲ.

ಮಳೆಗಾಲದ ಫೋಟೋಗ್ರಫಿಗಳ ಮಜಾ ಅನುಭವಿಸಬೇಕೆ? ಕೊಡಗಿನ ಮಳೆಗಾಲ ಬಿಟ್ಟುಹೋಗುವದೊಳಗೆ ಕ್ಯಾಮರಾ ಹಿಡಿದು ಸುತ್ತಾಡಿ.

- ಪುತ್ತರಿರ ಕರುಣ್ ಕಾಳಯ್ಯ