ಮಡಿಕೇರಿ, ಜು. 19: ಆಟಿ ಮಾಸದ ಸಂಸ್ಕøತಿ ಮತ್ತು ಅರೆ ಭಾಷಾ ಸಂಸ್ಕøತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಕರ್ನಾಟಕ ಅರೆÀಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರೆಭಾಷಾ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ. ಜಯರಾಮ, ಮಡಿಕೇರಿ, ಸುಳ್ಯ ಹಾಗೂ ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕುಕ್ಕೇರ ಕುಟುಂಬಸ್ಥರ ಸಹಯೋಗದಲ್ಲಿ ಮಡಿಕೇರಿಯ ದೇವಸ್ತೂರು ಗ್ರಾಮದ ಕುಕ್ಕೇರ ಪಳಂಗಪ್ಪನವರ ಗದ್ದೆಯಲ್ಲಿ ತಾ. 22 ರಂದು ಬೆಳಿಗ್ಗೆ 9.30 ರಿಂದ ಜಿಲ್ಲಾ ಮಟ್ಟದ ‘ಆಟಿ ನಾಟಿ ಕೂಡು ಕೂಟ’ ಕಾರ್ಯಕ್ರಮ ನಡೆಯಲಿದೆ. ಕೂಡು ಕೂಟವನ್ನು ಪಟ್ಟೆದಾರರಾದ ಕುಕ್ಕೇರ ತಮ್ಮಯ್ಯ ಉದ್ಘಾಟಿಸಲಿದ್ದು, ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆÉಯಲಿವೆ. ಕೆಸರು ಗದ್ದೆ ಓಟ, ಅಗೆ ತೆಗೆವ ಸ್ಪರ್ಧೆ, ನಾಟಿ ನೆಡುವ ಸ್ಪರ್ಧೆ, ಅಡಿಕೆ ಹಾಳೆಯಲ್ಲಿ ಎಳೆಯುವ ಸ್ಪರ್ಧೆ, ಹಗ್ಗಜಗ್ಗಾಟ, ಥ್ರೋಬಾಲ್, ವಾಲಿಬಾಲ್ ಸೇರಿದಂತೆ ಗ್ರಾಮೀಣ ಸೊಗಡಿನ ಮನೋರಂಜನಾತ್ಮಕ ಕ್ರೀಡಾಕೂಟ ನಡೆಯಲಿದೆ.ಆಟಿ ಹಬ್ಬದ ಸಾಂಪ್ರದಾಯಿಕ ಊಟೋಪಚಾರದ ನಂತರ ಸಮಾರೋಪ ಸಮಾರಂಭ ನಡೆಯಲಿದ್ದು, ಇದೇ ಸಂದರ್ಭ ಕೆಸರು ಗದ್ದೆಯಲ್ಲಿ ಹಿಂದಕ್ಕೆ ನಡೆಯುವ ಸ್ಪರ್ಧೆ ಕೂಡ ನಡೆಯಲಿದೆ ಎಂದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆÉ.ಜಿ. ಬೋಪಯ್ಯ,

(ಮೊದಲ ಪುಟದಿಂದ) ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಯಾಲದಾಳು ಪದ್ಮಾವತಿ, ತಾಪಂ. ಸದಸ್ಯ ರಾಯ್ ತಮ್ಮಯ್ಯ, ಗಾಳಿಬೀಡು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ್ ಸೋಮಯ್ಯ, ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಂಜೆ 4.30ರ ನಂತರ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಯರಾಮ ತಿಳಿಸಿದರು.

ತಾ. 29 ರಂದು ಅರೆಭಾಷೆ ಲಿಪಿ, ವ್ಯಾಕರಣ ಮತ್ತು ಭಾಷಾ ಸಬಲೀಕರಣಕ್ಕೆ ಪ್ರೊ. ಕೋಡಿ ಕುಶಾಲಪ್ಪ ಗೌಡರ ಕೊಡುಗೆ ಹಾಗೂ ಕೋಡಿ ಅವರ ಕೊಡುಗೆ ಮತ್ತು ಸಾಹಿತ್ಯಾವಲೋಕನ ಕಾರ್ಯಕ್ರಮ ತಾ. 29 ರಂದು ಸುಳ್ಯದ ಕೆ.ಪಿ.ಜಿ. ಲಾ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಅಕಾಡೆಮಿಯ ಪ್ರಥಮ ಅಧ್ಯಕ್ಷರಾದ ಎನ್.ಎಸ್. ದೇವಿಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಹಾಗೂ ಭಾಷಾ ವಿಜ್ಞಾನಿ ಪ್ರೊ.ಕೆ. ಕುಶಾಲಪ್ಪ ಗೌಡ ಅವರು ಉಪಸ್ಥಿತರಿರುವರು. ಅರೆ ಭಾಷೆ ಲಿಪಿ, ವ್ಯಾಕರಣ ಮತ್ತು ಸಬಲೀಕರಣ ವಿಷಯದ ಕುರಿತು ಬೆಳಗ್ಗೆ 10.30ಕ್ಕೆ ವಿಚಾರಗೋಷ್ಠಿ ಡಾ.ಎನ್. ಸುಕುಮಾರ ಗೌಡ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರಾದ ಡಾ.ಪುರುಷೋತ್ತಮ ಬಿಳಿಮಲೆ, ಗುಲ್ಬರ್ಗ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ರಾಮಸ್ವಾಮಿ ಚಲ್ಲಪ್ಪ ಗೌಡ ವಿಚಾರ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪ್ರೊ. ಕೋಡಿ ಕುಶಾಲಪ್ಪ ಗೌಡರ ಬರಹ ಅವಲೋಕನ-ಭಾಷೆ, ಅಧ್ಯಯನ, ಅಭಿವ್ಯಕ್ತಿ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ಸಾಹಿತಿಗಳಾದ ಡಾ. ಕೆ. ಚಿನ್ನಪ್ಪ ಗೌಡ, ಡಾ. ಹರಿಕೃಷ್ಣ ಭರಣ್ಯ, ಪ್ರತಿಭಾ ನಂದ ಕುಮಾರ್, ವಿಚಾರ ಮಂಡಿಸಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ ಡಾ. ಬಿ.ಎ. ವಿವೇಕ ರೈ ವಹಿಸಲಿದ್ದಾರೆ.

ವಿಚಾರ ಗೋಷ್ಠಿಯ ಬಳಿಕ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ. ಜಯರಾಮ ಅವರ ಸಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರೊ.ಕೆ. ಕುಶಾಲಪ್ಪ ಗೌಡರ ಅರೆಭಾಷೆ ಧ್ವನಿಮಾಶಾಸ್ತ್ರ ಲಿಪಿಯ ತರಬೇತು ಶಿಬಿರವನ್ನು ಸಾಂಕೇತಿಕವಾಗಿ ಆರಂಭಿಸಲಾಗು ವದು. ಮತ್ತು ಪ್ರೊ. ಕೆ. ಕುಶಾಲಪ್ಪ ಗೌಡರಿಗೆ ಗೌರವಾರ್ಪಣೆ ಮಾಡ ಲಾಗುವದು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ಕೆ.ವಿ. ರೇಣುಕಾಪ್ರಸಾದ್ ಪಾಲ್ಗೊಳ್ಳಲಿ ದ್ದಾರೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆÉಮಿ ಸದಸ್ಯರಾದ ಎ.ಕೆ.ಹಿಮಕರ, ಕಾರ್ಯಕ್ರಮ ಸಂಚಾಲಕರಾದ ಕಾನೆಹಿತ್ಲು ಮೊಣ್ಣಪ್ಪ, ಕುಂಬುಗೌಡನ ಪ್ರಸನ್ನ, ಗಾಳಿಬೀಡು ಗ್ರಾಮ ಪಂಚಾಯಿತಿ ಸದಸ್ಯರಾದ ಕುಕ್ಕೇರ ಪ್ರದೀಪ್, ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿದ್ದರು.