ಕುಂಬಳೆ, ಜು. 19: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲ ಸಹಯೋಗದಲ್ಲಿ ಪ್ರತಿವರ್ಷ ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ ನಡೆದು ಬರುವ ಸಣ್ಣ ಕತಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಅಕ್ಷತಾರಾಜ್ ಪೆರ್ಲ ಇವರ ‘ಕಾಸಿನಸರ’ ಕತೆಗೆ ದೊರಕಿದೆ. ಪೆರ್ಲ ಕಯ್ಯಂಕೂಡೆಲು ಗಣರಾಜಭಟ್ ಮಡದಿ ಇವರು ‘ಅಕ್ಷರ’ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದಾರೆ.

ಅನ್ನಪೂರ್ಣ ಬೆಜಪ್ಪೆ ಇವರ ‘ಒಲವಿನಬಂಧ’ ಕತೆ ದ್ವಿತೀಯ ಬಹುಮಾನ ಗೆದ್ದುಕೊಂಡಿದೆ. ಮಡಿಕೇರಿ ಮೂಲದ ಬಿ.ಎನ್. ಮನೋರಮಾ ಇವರ ‘ಶಾರದೆ ಶಾಪ’ ಕತೆಗೆ ತೃತೀಯ ಬಹುಮಾನ ಲಭಿಸಿದೆ. ಲೇಖಿಕೆಯೂ ವೃತ್ತಿಯಲ್ಲಿ ಕಲಾಸಂಶೋಧಕಿಯೂ ಆಗಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ಪುಸ್ತಕವನ್ನೂ ಬರೆದಿದ್ದಾರೆ.