ಮಡಿಕೇರಿ, ಜು. 19: ಕೊಡಗು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಚುನಾವಣೆಯ ಬಿಸಿ ಎದುರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿ.ಆರ್. ಸವಿತಾ ರೈ, ಜಿ.ವಿ. ರವಿಕುಮಾರ್, ಚಟ್ಟಂಗಡ ರವಿ ಸುಬ್ಬಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಗುರುವಾರ ಮಧ್ಯಾಹ್ನ 3 ಗಂಟೆ ಕೊನೆ ಅವಧಿಯಾಗಿತ್ತು. ಚುನಾವಣಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ನಾಮಪತ್ರ ಸ್ವೀಕರಿಸಿದರು.
ಮೂರು ಉಪಾಧ್ಯಕ್ಷ ಸ್ಥಾನಕ್ಕೆ ಪಳೆಯಂಡ ಪಾರ್ಥ ಚಿಣ್ಣಪ್ಪ, ಎಸ್. ಮಹೇಶ್ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲ. ಮೂರು ಕಾರ್ಯದರ್ಶಿ ಸ್ಥಾನಕ್ಕೆ ಪಿ.ವಿ. ಆನಂದ, ಜಿ.ವಿ. ರವಿಕುಮಾರ್ (ಕೇಂದ್ರ), ಎ.ಎನ್. ವಾಸು, ಎಚ್.ಕೆ. ಜಗದೀಶ್ (ಗ್ರಾಮಾಂತರ) ನಾಮಪತ್ರ ಸಲ್ಲಿಸಿದ್ದಾರೆ.
15 ನಿರ್ದೇಶಕ ಸ್ಥಾನಕ್ಕೆ 20 ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಟಿ.ಕೆ. ಸಂತೋಷ್, ಉದಯ್ ಮೊಣ್ಣಪ್ಪ, ಎಂ.ಎಸ್. ನಾಸೀರ್, ಬಿ.ಜಿ. ಮಂಜು, ಆರ್.ಆರ್. ಮನೋಜ್, ಎಂ. ಮಲ್ಲಿಕಾರ್ಜುನ, ಎಚ್.ವಿ. ಯಶೋಧಾ, ನವೀನ್ ಸುವರ್ಣ, ವನಿತಾ ಚಂದ್ರಮೋಹನ್, ಬಿ.ಡಿ. ರಾಜು ರೈ, ಎಂ.ಎನ್. ಚಂದ್ರಮೋಹನ್, ಕೊಡೆಕ್ಕಲ್ ಗಣೇಶ್, ಕುಪ್ಪಂಡ ಗಣಪತಿ ದತ್ತಾತ್ರಿ, ಚಟ್ಟಂಗಡ ರವಿ ಸುಬ್ಬಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ, ಎಸ್.ಎಂ. ಮುಬಾರಕ್, ಚೆರಿಯಮನೆ ಕೆ. ಸುರೇಶ್, ಟಿ.ಎನ್. ಮಂಜುನಾಥ್, ಟಿ.ಆರ್. ಪ್ರಭುದೇವ್, ಜೆ. ಪ್ರೇಮ್ಕುಮಾರ್ ನಾಮಪತ್ರ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಾಚರಣಿಯಂಡ ಅನು ಕಾರ್ಯಪ್ಪ, ಖಜಾಂಚಿ ಸ್ಥಾನಕ್ಕೆ ಎಂ.ಕೆ. ಅರುಣ್ಕುಮಾರ್, ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಎ.ಆರ್. ಕುಟ್ಟಪ್ಪ ನಾಮಪತ್ರ ಸಲ್ಲಿ
ಸಿದ್ದು ಅವಿರೋಧ ಆಯ್ಕೆಯಾಗಲಿ ದ್ದಾರೆ. ನಾಮಪತ್ರ ಪರಿಶೀಲನೆ ಬಳಿಕ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ. ಜು.22 ರಂದು ಮಧ್ಯಾಹ್ನ 1 ಗಂಟೆ ಬಳಿಕ ಪತ್ರಿಕಾ ಭವನದಲ್ಲಿ ನಾಮಪತ್ರ ಪರಿಶೀಲನೆ ನಡೆಯಲಿದೆ.