ಮಡಿಕೇರಿ, ಜು. 19: ದೇಶದ ರಕ್ಷಣೆಗೆ ಕೊಡುಗೆ ಸಮರ್ಪಿಸಬೇಕೆಂಬ ಮಹಾತ್ವಾಂಕ್ಷೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಸಿ.ಐ.ಟಿ. ಕಾಲೇಜಿನ ಆವರಣದಲ್ಲಿ ತರಬೇತಿ ಆರಂಭ ವಾಗಿದೆ. ಪರೀಕ್ಷಾ ಪೂರ್ವಭಾವಿ ತರಬೇತಿ ಕಾರ್ಯಕ್ರಮಕ್ಕೆ

ಕಾಲೇಜಿನ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾರ್ಚಂಡ ಗಣೇಶ್ ಉಪಸ್ಥಿತರಿದ್ದರು. ಶಿಬಿರದ ನೇತೃತ್ವವನ್ನು ಕುಮಾರ್ ಶರ್ಮ ವಹಿಸಿಕೊಂಡಿದ್ದು, ತರಬೇತಿ ಆರಂಭ ಗೊಂಡಿದೆ. ಹೆಚ್ಚಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಇಚ್ಚಿಸುವ ಆಸಕ್ತ ಪಿ.ಯು. ವಿದ್ಯಾರ್ಥಿಗಳು ಹಾಗೂ ಪಿ.ಯು. ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಇದರ ಸದುಪ ಯೋಗವನ್ನು ಪಡೆದುಕೊಳ್ಳಬಹುದು. 30 ದಿನಗಳ ಕಾರ್ಯಾಗಾರ ಇದಾಗಿದ್ದು, ತಾ. 16 ರಿಂದ ಆಗಸ್ಟ್ 16 ರವರೆಗೆ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 7 ಗಂಟೆಯವರೆಗೆ ನಡೆಯಲಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊ. 9448582418 ರಲ್ಲಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.