ಕರಿಕೆ, ಜು. 19: ಇಲ್ಲಿಗೆ ಸಮೀಪದ ಪೆರಾಜೆ ಗ್ರಾಮದಿಂದ ಕೇರಳದ ಕಾಸರಗೋಡು ಜಿಲ್ಲೆಗೆ ಅಕ್ರಮವಾಗಿ ಬೀಟೆ ಸಾಗಾಟ ಮಾಡುವ ಸಂದರ್ಭ ಪೆರಾಜೆ ಕುಂಬಳಚೇರಿಯ ಕುಂದಲ್ಪಾಡಿ ಎಂಬಲ್ಲಿ ರಾತ್ರಿ ಗಸ್ತುವಿನಲ್ಲಿದ್ದ ಅರಣ್ಯ ಸಿಬ್ಬಂದಿಗಳನ್ನು ಕಂಡು ವಾಹನ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕೇರಳ ಮೂಲದ ಬಂದಡ್ಕ ಕುಟ್ಟಕೋಲುವಿನ ಮಾಲೀಕ ಸಿನೋಜ್ ಎಂಬವರಿಗೆ ಸೇರಿದ ಮಹೇಂದ್ರ ಪಿಕ್‍ಅಪ್ ವಾಹನ (ಕೆಎಲ್‍ಸಿ 59 3110) ಮತ್ತು ಸುಮಾರು ಹನ್ನೆರಡು ಲಕ್ಷ ಮೌಲ್ಯದ ಏಳು ಅಡಿ ಉದ್ದದ ಏಳು ಬೀಟೆ ಮರದ ನಾಟಗಳನ್ನು ಇಲಾಖೆಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಸಂಪಾಜೆ ವಲಯಾರಣ್ಯಧಿಕಾರಿ ಶಮಾ, ಉಪ ವಲಯಾರಣ್ಯಧಿಕಾರಿ ವಿಜಯೇಂದ್ರ ಕುಮಾರ್, ಅರಣ್ಯ ರಕ್ಷಕರಾದ ತಿಲಕ, ನಾಗರಾಜು, ಕಾರ್ತಿಕ್, ಜಗನ್ನಾಥ, ಚಾಲಕ ಶಿವಪ್ರಸಾದ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

-ಹೊದ್ದೆಟ್ಟಿ ಸುಧೀರ್