ಮಡಿಕೇರಿ, ಜು. 19: ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನೇಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಹೆಲ್ತ್‍ಕೇರ್ ಅಂಡ್ ಪ್ರೊವೈಡರ್ಸ್ (ಎನ್.ಎ.ಬಿ.ಎಚ್) ಕ್ವಾಲಿಟಿ ಕೋ ಆರ್ಡಿನೇಟರ್‍ನಲ್ಲಿ ಉದ್ಯೋಗದಲ್ಲಿರುವ ಡಾ. ನೆಲ್ಲೀರ ಶ್ರುತಿ ಸೋಮಯ್ಯ (ತಾಮನೆ ಕುಡುವಂಡ) ಅವರಿಗೆ ಪಿ.ಎಚ್.ಡಿ. ಪದವಿ ದೊರೆತಿದೆ. ಇವರು ಇತ್ತೀಚೆಗೆ ಈ ವಿಷಯದಲ್ಲಿ ಬರೆದ ಪ್ರಬಂಧಕ್ಕೆ ರಾಜಸ್ಥಾನದ ಜೆ.ಜೆ.ಟಿ. ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. ಹೆಲ್ತ್‍ಕೇರ್ ಮೇನೇಜ್‍ಮೆಂಟ್‍ನಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡಿರುವ ಇವರು ಮೂಲತಃ ಪರಕಟಗೇರಿಯ ನೆಲ್ಲೀರ ಹರೀಶ್ ಸೋಮಯ್ಯ ಅವರ ಪತ್ನಿ ಹಾಗೂ ಕುಡುವಂಡ ಶಂಭು ಪೂವಣ್ಣ ಮತ್ತು ಸುಳಿ ದಂಪತಿಯ ಪುತ್ರಿ.