ಮಡಿಕೇರಿ, ಜು. 19: ಕೊಡಗು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಆಗಸ್ಟ್ 5 ರಂದು ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಕಾರ್ಯ ನಿರ್ವಹಿಸಲಿದ್ದಾರೆ.

ತಾ. 17 ರಂದು ಮಧ್ಯಾಹ್ನ 12 ಗಂಟೆಗೆ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ತಾ. 19 ರಂದು 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಪ್ರತಿನಿತ್ಯ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ತಾ. 22 ರಂದು ಮಧ್ಯಾಹ್ನ 1 ಗಂಟೆ ನಂತರ ನಾಮಪತ್ರ ಪರಿಶೀಲಿಸಲಾಗುತ್ತದೆ. ತಾ. 24 ರಂದು ಮಧ್ಯಾಹ್ನ 12 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಲಾಗಿದೆ. ಅಧ್ಯಕ್ಷ (ಕೇಂದ್ರ ಸ್ಥಾನ,), ಪ್ರಧಾನ ಕಾರ್ಯದರ್ಶಿ (ಕೇಂದ್ರ ಸ್ಥಾನ), ಮೂರು ಉಪಾಧ್ಯಕ್ಷ (1 ಕೇಂದ್ರ ಸ್ಥಾನ, 2 ಗ್ರಾಮೀಣ), ಖಜಾಂಚಿ (ಕೇಂದ್ರ ಸ್ಥಾನ), ಮೂರು ಕಾರ್ಯದರ್ಶಿ (1 ಕೇಂದ್ರ ಸ್ಥಾನ, 2 ಗ್ರಾಮೀಣ), 15 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಜಿಲ್ಲೆಯಿಂದ ರಾಜ್ಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯೂ ಇದೇ ಸಂದರ್ಭ ನಡೆಯಲಿದೆ. ಪದಾಧಿಕಾರಿ ಹುದ್ದೆಗೆ 2 ಸಾವಿರ, ನಿರ್ದೇಶಕ ಸ್ಥಾನಕ್ಕೆ ರೂ. 1 ಸಾವಿರ ಶುಲ್ಕ ಪಾವತಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವವರು ಕಳೆದ 4 ವರ್ಷದಿಂದ ಸತತವಾಗಿ ಸದಸ್ಯರಾಗಿರಬೇಕು. ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸಿರುವವರು ಒಂದು ಅವಧಿಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾಯಿತ ನಿರ್ದೇಶಕರಾಗಿರಬೇಕು. ಆಗಸ್ಟ್ 5 ರಂದು ಪತ್ರಿಕಾ ಭವನದಲ್ಲಿ ಮತದಾನದಲ್ಲಿ ನಡೆಯಲಿದೆ.