ಕುಶಾಲನಗರ, ಜು. 19: ಜೆಸಿಐ ಕುಶಾಲನಗರ ಕಾವೇರಿ ಆಶ್ರಯದಲ್ಲಿ ಬಿಪಿ, ಡಯಾಬಿಟಿಸ್ ಮುಕ್ತ ಜೀವನ ಕಾರ್ಯಕ್ರಮ ತಾ. 22 ರಂದು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಬಿ. ಅಮೃತ್ರಾಜ್ ತಿಳಿಸಿದ್ದಾರೆ.
ಸುದ್ದಿಮನೆಯಲ್ಲಿ ನಡೆದ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಸ್ತುತ ಒತ್ತಡದ ಜೀವನದಿಂದಾಗಿ ಬಿಪಿ, ಡಯಾಬಿಟಿಸ್ನಂತಹ ರೋಗಗಳು ಬಹುತೇಕರನ್ನು ಕಾಡುತ್ತಿದೆ. ದೈನಂದಿನ ಚಟುವಟಿಕೆಗಳ ನಡುವೆ ಯೋಗಕ್ಕೆ ಸಮಯ ಮೀಸಲಿರಿಸಿದಲ್ಲಿ ಅನೇಕ ರೋಗಗಳಿಂದ ಮುಕ್ತರಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಯೋಗ ವಿಸ್ಮಯ ಸಂಸ್ಥೆ ಸಹಯೋಗದೊಂದಿಗೆ ಒಂದು ದಿನದ ಯೋಗ ತರಬೇತಿ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.30 ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು ಎಂದು ಅವರು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜೆಸಿಐ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಸುಜಯ್ ನಾಗ್, ನಿರ್ದೇಶಕ ಪ್ರಶಾಂತ್ ಇದ್ದರು.