*ಗೋಣಿಕೊಪ್ಪಲು, 19: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅತ್ತೂರು ಗ್ರಾಮದ ಸಭೆಯು ತಾ. 23 ರಂದು ಪೂರ್ವಾಹ್ನ 10.30 ಗಂಟೆಗೆ ಅತ್ತೂರು ಪ್ರಾಥಮಿಕ ಶಾಲೆಯಲ್ಲಿ ಪಂಚಾಯಿತಿ ಸದಸ್ಯೆ ಪಿ.ಎಂ. ಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕುಂದ, ಈಚೂರು ಗ್ರಾಮದ ವಾರ್ಡ್ ಸಭೆಯು ತಾ. 24 ರಂದು ಪೂರ್ವಾಹ್ನ 10.30 ಗಂಟೆಗೆ ಕುಂದ ಗ್ರಾಮದ ದವಸ ಭಂಡಾರ ಕಟ್ಟಡದಲ್ಲಿ ಪಂಚಾಯಿತಿ ಸದಸ್ಯ ಜಿ.ಎನ್. ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ, ಕೆ ಬೈಗೋಡು ಗ್ರಾಮದ ವಾರ್ಡ್ ಸಭೆ ತಾ. 24 ರಂದು ಅಪರಾಹ್ನ 2.30 ಗಂಟೆಗೆ ಕೊಳತ್ತೋಡು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಪಂಚಾಯಿತಿ ಸದಸ್ಯೆ ಕೆ.ಎಂ. ರೇಖಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಹಾತೂರು ಗ್ರಾಮದ ವಾರ್ಡ್ ಸಭೆಯು ತಾ. 25 ರಂದು ಪೂರ್ವಾಹ್ನ 10.30 ಗಂಟೆಗೆ ಹಾತೂರು ಮಹಿಳಾ ಸಮಾಜದ ಕಟ್ಟಡದಲ್ಲಿ ಪಂಚಾಯಿತಿ ಸದಸ್ಯ ಹೆಚ್.ಡಿ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ, ಕೈಕೇರಿ ಗ್ರಾಮದ ವಾರ್ಡ್ ಸಭೆಯು ತಾ. 26 ರಂದು ಪೂರ್ವಾಹ್ನ 10.30 ಗಂಟೆಗೆ ಕೈಕೇರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಕೆ.ಡಿ. ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆಸಲಾಗುವದು.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಗ್ರಾಮ ಸಭೆಯನ್ನು ತಾ. 27 ರಂದು ಪೂರ್ವಾಹ್ನ 11 ಗಂಟೆಗೆ ಹಾತೂರು ಗ್ರಾಮದ ಹಾತೂರು ಪ್ರೌಢಶಾಲಾ ಕಟ್ಟಡದಲ್ಲಿ ಪಂಚಾಯಿತಿ ಅಧ್ಯಕ್ಷೆ ಬಿ.ಎನ್. ಜಯಂತಿ ಅವರ ಅಧ್ಯಕ್ಷತೆಯಲ್ಲಿ, ನೋಡೆಲ್ ಅಧಿಕಾರಿ, ರೀನಾ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಪೊನ್ನಂಪೇಟೆ ಇವರ ಸಮ್ಮುಖದಲ್ಲಿ ನಿಗದಿಯಾಗಿದೆ.