ನಾಪೆÇೀಕ್ಲು, ಜು. 19: ಈಗ ಎಲ್ಲೆಡೆ ಗಣಕೀಕೃತ ಯಂತ್ರಗಳದ್ದೇ ಕಾರುಬಾರು. ಎಲ್ಲ ಕಡೆಗಳಲ್ಲಿಯೂ ಇಂಟರ್‍ನೆಟ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸ ಲಾಗುತ್ತಿದೆ. ಇದಕ್ಕೆಲ್ಲಾ ಸರ್ವರ್ ಸರಿಯಾಗಿರಬೇಕು.
ಆದರೆ ನಾಪೆÇೀಕ್ಲು ವ್ಯಾಪ್ತಿಯ ಕಂದಾಯ ಕಚೇರಿ, ಬ್ಯಾಂಕ್‍ಗಳು, ಪಂಚಾಯಿತಿ ಕಚೇರಿ, ಕಂಪ್ಯೂಟರ್ ಸೆಂಟರ್‍ಗಳಿಗೆ, ವಿವಿಧ ಕೆಲಸ ಕಾರ್ಯಗಳಿಗೆ ತೆರಳಿದರೆ ಸರ್ವರ್ ಡೌನ್ ಆಗಿದೆ ಎನ್ನುವ ಉತ್ತರಗಳು ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ.
ಸರ್ವರ್ ಡೌನ್ ಕಾರಣದಿಂದ ರೈತರು ಆರ್‍ಟಿಸಿ ಪಡೆಯಲು ಸಾಧ್ಯವಾಗದೆ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಹಿಂತಿರುಗುತ್ತಿರುವದು ಕಂಡು ಬರುತ್ತಿದೆ. ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಎಟಿಎಂನಲ್ಲಿ ಹಣ ಕೂಡ ಸಿಗದಂತಾಗಿದೆ. ಅದೂ ಸಾಲದೆಂಬಂತೆ ಮೊಬೈಲ್‍ನಲ್ಲಿ ಮಾತನಾಡಲು ಆಗದ ಪರಿಸ್ಥಿತಿ ಆಗಾಗ ನಿರ್ಮಾಣವಾಗುತ್ತ್ತಿದೆ. ಸ್ಥಿರ ದೂರವಾಣಿಗಳ ಪರಿಸ್ಥಿತಿ ಇದೆಲ್ಲಕ್ಕಿಂತ ಭಿನ್ನವಾಗಿದೆ. ದೂರವಾಣಿ ಸಂಪರ್ಕ ಕಡಿತಗೊಂಡು ತಿಂಗಳುಗಳೇ ಕಳೆದರೂ ಅದನ್ನು ದುರಸ್ತಿ ಪಡಿಸುವವರು ಗತಿಯಿಲ್ಲ ಎಂಬಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ನಾಪೆÇೀಕ್ಲು ದೂರವಾಣಿ ವಿನಿಮಯ ಕೇಂದ್ರದ ಅವ್ಯವಸ್ಥೆಯೇ ಕಾರಣ. ಅಲ್ಲಿ ಇಂಜಿನಿಯರ್ ಸೇರಿದಂತೆ ಬೇಕಾದ ಅಗತ್ಯ ಸಿಬ್ಬಂದಿಗಳಿಲ್ಲ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಅಲ್ಲಿ ಜನರೇಟರ್ ಚಾಲೂ ಮಾಡುತ್ತಿಲ್ಲ. ಕೂಡಲೇ ಈ ಅವ್ಯವಸ್ಥೆಗಳನ್ನು ಸರಿಪಡಿಸಲು ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಜಗದೀಶ್, ಕಿಶೋರ್ ಮತ್ತಿತರರು ಆಗ್ರಹಿಸಿದ್ದಾರೆ.