ಮಡಿಕೇರಿ, ಜು. 20: ಮರಗೋಡು ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ವಾರ್ಡ್ ಸಭೆ ತಾ. 23 ರಂದು ಪೂರ್ವಾಹ್ನ 10.30 ಗಂಟೆಗೆ ಮರಗೋಡು ಗ್ರಾಮದ ವಿವೇಕಾನಂದ ಯುವಕ ಸಂಘ ಸಭಾಂಗಣದಲ್ಲಿ ಮತ್ತು ಅಪರಾಹ್ನ 2.30 ಗಂಟೆಗೆ ಕಟ್ಟೆಮಾಡು ಗ್ರಾಮದ ವಾರ್ಡ್ ಸಭೆಯನ್ನು ಗ್ರೀನ್ಸ್ ಯುವಕ ಸಂಘ ಸಭಾಂಗಣದಲ್ಲಿ ನಡೆಸಲಾಗುವದು ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.