ಶನಿವಾರಸಂತೆ, ಜು. 20: ರೋಟರಿ ಸೇವಾ ಮನೋಭಾವನೆಯ ಒಂದು ಸಂಸ್ಥೆ ಎಂದು ರೋಟರಿ ಜಿಲ್ಲಾ ಮುಖ್ಯ ಸಲಹೆಗಾರ ಜಿ.ಕೆ. ಬಾಲಕೃಷ್ಣ ಅಭಿಪ್ರಾಯಪಟ್ಟರು.

ಸಮೀಪದ ಗುಡುಗಳಲೆ ಆರ್.ವಿ. ಕಲ್ಯಾಣ ಮಂಟಪದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಲ್ಸ್ ಪೋಲಿಯೋ ನಿರ್ಮೂಲನೆಗಾಗಿ ಜಗತ್ತಿನಾ ದ್ಯಂತ ಪೋಲಿಯೋ ಹನಿ ಗಳನ್ನು ಹಾಕಿ ಯಶಸ್ವಿಯಾಗಿ ರುವದೇ ಸೇವಾ ಮನೋಭಾ ವನೆಗೆ ಸಾಕ್ಷಿ ಯಾಗಿದೆ. ರೊಟೇರಿಯನ್‍ಗಳು ಪ್ರತಿಫಲಾಪೇಕ್ಷೆಯಿಲ್ಲದೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ಸಹಕಾರ ತೋರಬೇಕು ಎಂದು ಅವರು ಕರೆ ನೀಡಿದರು.

2022 ಕ್ಕೆ ಪ್ರಪಂಚವನ್ನೇ ಪೋಲಿಯೋ ಮುಕ್ತವನ್ನಾಗಿಸಬಹುದು. ರೋಟರಿ ಜಿಲ್ಲಾ ಗವರ್ನರ್ ಅವರ ಅಪೇಕ್ಷೆಯಂತೆ ಆಶಾಸ್ಫೂರ್ತಿ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಗಳನ್ನು ದತ್ತು ಸ್ವೀಕರಿಸುವ ಮೂಲಕ ಅವುಗಳ ಕೊರತೆ ನೀಗಿಸಿ ಅಭಿವೃದ್ಧಿಪಡಿಸಲಗುವದು ಎಂದು ಬಾಲಕೃಷ್ಣ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ವಹಿಸಿ ಮಾತನಾಡಿ, ಪ್ರಸಕ್ತ ವರ್ಷ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಮುಖ್ಯ ಅತಿಥಿ ಸಹಾಯಕ ಗವರ್ನರ್ ಧರ್ಮಪುರ ನಾರಾಯಣನ್, ವಲಯಾಧಿಕಾರಿ ಭರತ್ ಭೀಮಯ್ಯ, ನಿರ್ಗಮಿತ ರೋಟರಿ ಅಧ್ಯಕ್ಷ ಹೆಚ್.ಎಸ್. ವಸಂತಕುಮಾರ್, ನಿರ್ಗಮಿತ ಕಾರ್ಯದರ್ಶಿ ಎಸ್.ಎಸ್. ಸಾಗರ್, ನೂತನ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ರೊಟೇರಿಯನ್‍ಗಳಾದ ಅರವಿಂದ್, ದಿವಾಕರ್, ಹೆಚ್.ಪಿ. ಮೋಹನ್, ಚಂದನ್, ಬಿ.ಎಸ್.ಆರ್. ನಾಗೇಶ್, ಡಾ. ಪ್ರಶಾಂತ್, ಪ್ರಕೃತಿ ಮೋಹನ್ ಇತರರು ಉಪಸ್ಥಿತರಿದ್ದರು.