ಮಡಿಕೇರಿ, ಜು. 20: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜಿಲ್ಲಾಮಟ್ಟದ ಆಟಿ-ನಾಟಿ ಕೂಡುಕೂಟ ಕಾರ್ಯಕ್ರಮ ತಾಲೂಕಿನ ದೇವಸ್ತೂರು ಗ್ರಾಮದ ಕುಕ್ಕೇರ ಪಳಂಗಪ್ಪ ಅವರ ಗದ್ದೆಯಲ್ಲಿ ತಾ. 22 ರಂದು ನಡೆಯಲಿದೆ. ಅರೆಭಾಷೆ ಸಂಸ್ಕøತಿಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಜಾನಪದ ಕಲಾಸ್ಪರ್ಧೆ ಏರ್ಪಡಿಸಲಾಗಿದೆ.
ಕಾಳು ಹೆಕ್ಕುವದು, 5 ವರ್ಷದೊಳಗಿನ ಹುಡುಗ ಮತ್ತು ಹುಡುಗಿಯರಿಗೆ, ಕೆಸರು ಗದ್ದೆ ಓಟ 6 ರಿಂದ 12 ವರ್ಷದೊಳಗಿನ ಹುಡುಗ ಮತ್ತು ಹುಡುಗಿಯರಿಗೆ, 13 ರಿಂದ 15 ವರ್ಷದೊಳಗಿನ ಹುಡುಗ ಮತ್ತು ಹುಡುಗಿಯರಿಗೆ ಮತ್ತು ಸಾರ್ವಜನಿಕ ಮಹಿಳೆಯರಿಗೆ ಮತ್ತು ಪುರುಷರಿಗೆ, ಅಗೆ ತೆಗೆಯುವ ಸ್ಪರ್ಧೆ-ಮಹಿಳೆಯರಿಗೆ. ನಾಟಿ ನೆಡುವ ಸ್ಪರ್ಧೆ-ಪುರುಷರಿಗೆ, ಅಡಿಕೆ ಹಾಳೆಲಿ ಎಳೆಯುವ ಸ್ಪರ್ಧೆ-ದಂಪತಿಗಳಿಗೆ, ಅಂಬುಗಾಯಿ-ಸಾರ್ವಜನಿಕ ಪುರುಷರಿಗೆ, ಹಗ್ಗಜಗ್ಗಾಟ-ಮಹಿಳೆಯರಿಗೆ ಮತ್ತು ಪುರುಷರಿಗೆ (ತಲಾ 6 ಜನರ ತಂಡ), ಥ್ರೋಬಾಲ್- ಮಹಿಳೆಯರಿಗೆ, ಪುರುಷರಿಗೆ- ವಾಲಿಬಾಲ್ ಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜಾನಪದ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಾ. 20 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಲು ಕೋರಿದೆ. ದೂರವಾಣಿ ಸಂಖ್ಯೆ: 08272-223055 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಹಾಗೂ ಸದಸ್ಯ ಸಂಚಾಲಕರಾದ ಕಾನೆಹಿತ್ಲು ಮೊಣ್ಣಪ್ಪ (9844187261), ಕುಂಬುಗೌಡನ ಪ್ರಸನ್ನ (9480022923) ಮತ್ತು ಅಧ್ಯಕ್ಷ ಪಿ.ಸಿ. ಜಯರಾಮ (9448625224) ಇವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ್ ತಿಳಿಸಿದ್ದಾರೆ.