ಗೋಣಿಕೊಪ್ಪ ವರದಿ, ಜು. 20: ಕುಮಟೂರು ಕೊಡವ ರಿಕ್ರೀಯೇಷನ್ ಕ್ಲಬ್ ವತಿಯಿಂದ ತಾ. 24 ರಂದು ಕುಟ್ಟ, ಕೆ. ಬಾಡಗ, ಶ್ರೀಮಂಗಲ, ನಾಲ್ಕೇರಿ ಹಾಗೂ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಸಾರ್ವಜನಿಕ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಕಾಕೂರು ಗ್ರಾಮದ ಕೋಟ್ರಂಗಡ ಸುಬ್ರಮಣಿ ಮತ್ತು ಮನು ಸೋಮಯ್ಯ ಅವರ ಗದ್ದೆಯಲ್ಲಿ ನಡೆಸಲಾಗುವದು.
ಪುರುಷರು, ಬಾಲಕರು, ಬಾಲಕಿಯರು ಹಾಗೂ ಮಹಿಳೆಯರಿಗೆ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವದು. ಹೆಚ್ಚಿನ ಮಾಹಿತಿಗೆ :9880445131, 9945046042, ಸಂಪರ್ಕಿಸಬಹುದು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.