ಪೊನ್ನಂಪೇಟೆ, ಜು. 20: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ 6ನೇ ವರ್ಷದ ರಾಜ್ಯಮಟ್ಟದ ನಿಸರ್ಗ ಕೆಸರುಗದ್ದೆ ಕ್ರೀಡಾಕೂಟ-2018’ ಅನ್ನು ಆ. 5 ರಂದು ಬಿಟ್ಟಂಗಾಲದಲ್ಲಿ ಆಯೋಜಿಸಲಾಗಿದೆ.
ವೀರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆಯ ಬದಿಯಲ್ಲಿರುವ ಬಿಟ್ಟಂಗಾಲದ ನಿವೃತ್ತ ಮೇ.ಜ. ಕುಪ್ಪಂಡ ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆಯಲಿರುವ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪುರುಷರಿಗೆ ಕಾಲ್ಚೆಂಡು ಪಂದ್ಯಾಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆ, ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆ ಓಟದ ಸ್ಪರ್ಧೆಯನ್ನು ಅಯೋಜಿಸಲಾಗಿದೆ.
ಕಾಲ್ಚೆಂಡು ಪಂದ್ಯಾಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾಗುವ ತಂಡಗಳಿಗೆ ನಗದು ಬಹುಮಾನ ಸೇರಿದಂತೆ ಪಾರಿತೋಷಕಗಳನ್ನು ನೀಡಲಾಗುವದು. ಕ್ರೀಡಾಕೂಟದ ದಿನದಂದು ಬೆಳಿಗ್ಗೆ 10 ಗಂಟೆಯೊಳಗಾಗಿ ತಂಡಗಳ ಹೆಸರು ನೋಂದಾವಣಿಗೆ ಅವಕಾಶವಿದೆ. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 8453390136, 9945265383 ಅಥವಾ 9535615759 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.