ಚೆಟ್ಟಳ್ಳಿ, ಜು. 20: ವೈನಾಡು ಜಿಲ್ಲೆಯ ಕಲ್ಪೆಟ್ಟ ಎಂಬಲ್ಲಿ ಕಾಫಿ ತೋಟಗಳ ನಡುವೆ 5ನೇ ವರ್ಷದ ದಿ ವೈನಾಡ್ ಜೀಪ್ ಕ್ಲಬ್ ಮಾನ್ಸೂನ್ ರ್ಯಾಲಿಯಲ್ಲಿ ಟೀಮ್ ಚಾಂಪಿಯನ್ಸ್ ತಂಡದ ನಾಯಕÀ ವಿಜಯವಾಡದ ವಂಶಿಮೆರ್ಲ ಹಾಗೂ ಕೊಡಗಿನ ಮೂವರು ರ್ಯಾಲಿಪಟುಗಳಾದ ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ, ಅಮ್ಮತ್ತಿಯವರಾದ ಕೊಂಗಂಡ ಗಗನ್ ಕರುಂಬಯ್ಯ ಹಾಗೂ ಉದ್ದಪಂಡ ಚೇತನ್ ರೋಮಾಂಚಕ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದ್ದಾರೆ.
ಡೀಸಲ್ ಕ್ಲಾಸ್ ಪ್ರಥಮ ಹಾಗೂ ಓವರಾಲ್ ಚಾಂಪಿಯನ್ ಆಫ್‍ದ ಈವೆಂಟ್‍ನ್ನು ಕೊಂಗೇಟಿರ ಬೋಪಯ್ಯ ಪಡೆದರೆ, ಡೀಸಲ್ ಕ್ಲಾಸ್‍ನಲ್ಲಿ ಉದ್ದಪಂಡ ಚೇತನ್ ಎರಡನೇ ಸ್ಥಾನವನ್ನು, ಎಸ್ಸುಯುವಿ ಕ್ಲಾಸ್‍ನಲ್ಲಿ ಕೊಂಗಂಡ ಗಗನ್ ಕರುಂಬಯ್ಯ ಮೊದಲ ಸ್ಥಾನವನ್ನು ವಂಶಿಮೆರ್ಲ ಎರಡನೇ ಸ್ಥಾನವನ್ನು, ಉದ್ದಪಂಡ ತಿಮ್ಮಣ್ಣ ಮೂರನೇ ಸ್ಥಾನ ಪಡೆದರು.
ವೈನಾಡಿನ ಕಾಫಿ ತೋಟಗಳ ನಡುವೆ ಹೊಸದಾಗಿ ಟ್ರಾಕ್‍ಗಳನ್ನು ಮಾಡಲಾಗಿ ಕಿರಿದಾದ ಕೆಸರು ತುಂಬಿರುವ ರಸ್ತೆಗಳ ಜೊತೆಗೆ ಏರುತಗ್ಗುಗಳು, ಭಾರೀ ಇಳಿಜಾರಿನ ನಡುವೆ ರ್ಯಾಲಿ ನಡೆಯುವಂತೆ ಆಯೋಜಿಸಲಾಗಿತ್ತು. ಸೌತ್ ಇಂಡಿಯಾದ ನುರಿತ 40 ರ್ಯಾಲಿ ಪಟುಗಳು ಭಾಗವಹಿಸಿದ್ದು, ಕೊನೆ ಹಂತದ ಗುರಿಯನ್ನು 6 ರಿಂದ 7 ವಾಹನಗಳು ತಲಪಲು ಸಾಧ್ಯವಾಯಿತು. ಅದರಲ್ಲಿ ಕೊಡಗಿನ ಮೂವರು ರ್ಯಾಲಿ ಪಟುಗಳು ತಮ್ಮ ಸಾಹಸ ಮೆರೆದಿದ್ದಾರೆ.
ಪ್ರಥಮ ಬಹುಮಾನವಾಗಿ 15ಸಾವಿರ ನಗದುÀ, ಸರ್ಟಿಫಿಕೇಟ್ ಹಾಗೂ ಪ್ರತಿಷ್ಠಿತ ಕಂಪನಿಗಳ ಗಿಫ್ಟ್ ಓಚರ್ಸ್‍ಗಳನ್ನು ಪಡೆದಿದ್ದಾರೆ. ವೈನಾಡಿನಲ್ಲಿ ಭಾಗವಹಿಸಿದ ರ್ಯಾಲಿಯಲ್ಲಿ ರೋಚಕ ಅನುಭವವಾಗಿದೆಂದು ಕೊಡಗಿನಿಂದ ಭಾಗವಹಿಸಿದ ರ್ಯಾಲಿಪಟುಗಳು ಹೇಳುತ್ತಾರೆ.
ಈ ಕ್ರೀಡಾಪಟುಗಳು ಹಲವು ಐಎನ್‍ಆರ್‍ಸಿ ರ್ಯಾಲಿಗಳಲ್ಲಿ, ವಿವಿಧ ಆಫ್‍ರೋಡ್‍ಗಳಲ್ಲಿ, ಆಟೋಕ್ರಾಸ್‍ಗಳಲೆಲ್ಲ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಗಸ್ಟ್ ಮೂರು, ನಾಲ್ಕರಂದು ಕೊಯಮತ್ತೂರುನಲ್ಲಿ ನಡೆಯುವ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಫ್‍ನ ರ್ಯಾಲಿಯಲ್ಲಿ ಈ ಮೂವರು ರ್ಯಾಲಿ ಪಟುಗಳು ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹಿರಿಯ ರ್ಯಾಲಿಪಟುಗಳಾದ ಮಾಳೇಟಿರ ಜಗತ್ ನಂಜಪ್ಪ ಹಾಗೂ ಉದ್ದಪಂಡ ಚೇತನ್ ತಾ. 21 ರಿಂದ (ಇಂದಿನಿಂದ) ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ವiಟ್ಟದ ರೇನ್ ಫಾರೆಸ್ಟ್ ಚ್ಯಾಲೆಂಜ್ನಲ್ಲಿ ಭಾಗವಹಿಸುತ್ತಿದ್ದಾರೆ.
-ಪುತ್ತರಿರಕರುಣ್ ಕಾಳಯ್ಯ