ಸಂಪಾಜೆ, ಜು. 20: ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್ ಸಂಪಾಜೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸಂಪಾಜೆ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ 2ನೇ ಉಪಜಿಲ್ಲಾ ರಾಜ್ಯಪಾಲ ಡಾ. ಗೀತಾಪ್ರಕಾಶ್ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಸಭಾಧ್ಯಕ್ಷತೆಯನ್ನು ಅಮೃತಾ ಅಪ್ಪಣ್ಣ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಇ.ವಿ. ಪ್ರಶಾಂತ್, ಕಾರ್ಯದರ್ಶಿಯಾಗಿ, ನಳಿನಿ ಕಿಶೋರ್, ಕೋಶಾಧಿಕಾರಿಯಾಗಿ ಧನಲಕ್ಷ್ಮಿ ನವೀನ್ ಅವರು ಅಧಿಕಾರ ಸ್ವೀಕರಿಸಿದರು. ಆ ಬಳಿಕ ಇ.ವಿ. ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ವೇದಿಕೆಯಲ್ಲಿ ಡಾ. ಗೀತಾಪ್ರಕಾಶ್, ಡಾ. ಗಾಯತ್ರಿ ಗೀತಾಪ್ರಕಾಶ್, ವಲಯಾಧ್ಯಕ್ಷ ಗಣೇಶ್ ಕಾಯ್ಕರೆ, ಪ್ರಾಂತೀಯ ಅಧ್ಯಕ್ಷ ಜಾಕೆ ಮಾಧವ ಗೌಡ, ಪ್ರಾದೇಶಿಕ ರಾಯಬಾರಿ ನಳಿನಿ ಕುಮಾರ್ ಕೋಡ್ತಕುಳಿ ಉಪಸ್ಥಿತರಿದ್ದರು. ಈ ಬಾರಿ ಎಸ್.ಎಸ್. ಎಲ್.ಸಿ. ಯಲ್ಲಿ ಶೇ. 100 ಫಲಿತಾಂಶ ತರುವಲ್ಲಿ ಯಶಸ್ವಿಯಾದ ಚೆಂಬು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ದೇಜಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿಟ್ಲ, ಸುಳ್ಯ, ಪಂಜ, ಗುತ್ತಿಗಾರು, ಜಾಲ್ಸೂರು ಲಯನ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

ಇ.ವಿ. ಪ್ರಶಾಂತ್ ನಿರೂಪಿಸಿ, ನಳಿನಿ ಕಿಶೋರ್ ವಂದಿಸಿದರು. ಅಪ್ಪಣ್ಣ ಟಿ.ಸಿ. ಪ್ರಾಯೋಜಕತ್ವದಲ್ಲಿ ರಾತ್ರಿಯ ಭೋಜನದ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.