ಮಡಿಕೇರಿ, ಜು. 23: ಪತ್ರಕರ್ತರ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ತಾ. 25 ರಂದು ಕೊಳಕೇರಿ ಗ್ರಾಮದಲ್ಲಿರುವ ದಿ.ಬಿದ್ದಾಟಂಡ ದೇವಯ್ಯ ಅವರ ಗದ್ದೆಯಲ್ಲಿ ಆಯೋಜಿಸಲಾಗಿದೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕ್ರೀಡಾಕೂಟಕ್ಕೆ ಅಂದು ಬೆಳಿಗ್ಗೆ 10.30 ಕ್ಕೆ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿದ್ದಾಟಂಡ ಎ. ಮುತ್ತಣ್ಣ ಚಾಲನೆ ನೀಡಲಿದ್ದಾರೆ.

4.30 ಗಂಟೆಗೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬೆಳೆಗಾರರಾದ ಅಪ್ಪಚ್ಚೀರ ಕೆ. ನಾಣಯ್ಯ, ಬಿದ್ದಾಟಂಡ ಟಿ. ಕಾರ್ಯಪ್ಪ, ಚೇಂದಂಡ ನವೀನ್, ಉದ್ಯಮಿ ಚುಪ್ಪ ನಾಗರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ 13 ತಂಡಗಳ ನಡುವೆ ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ, ಹ್ಯಾಂಡ್ ಬಾಲ್ ಪಂದ್ಯಾವಳಿ ನಡೆಯಲಿದೆ. ಮಡಿಕೇರಿ ಯಂಗ್ ಸ್ಟಾರ್ಸ್, ಸಿದ್ದಾಪುರ ದ ಗಜಪಡೆ ಎ, ಗಜಪಡೆ ಬಿ, ಮಡಿಕೇರಿ ಮೀಡಿಯಾ ಟೀಮ್, ಮಡಿಕೇರಿ ಯಂಗ್ ಸ್ಪೈಡರ್ಸ್ ಎ, ಯಂಗ್ ಸ್ಪೈಡರ್ಸ್ ಬಿ, ಸೋಮವಾರಪೇಟೆಯ ನಾರ್ಥ್ ಲಯನ್ಸ್, ಮಡಿಕೇರಿ ಬ್ಲ್ಯಾಕ್ ಕೋಬ್ರಾ, ಕುಶಾಲನಗರ ಕಿಂಗ್ಸ್, ವೀರಾಜಪೇಟೆ ಟೈಗರ್ಸ್, ಟೀಮ್ ಗೋಣಿಕೊಪ್ಪಲು, ಗೋಣಿಕೊಪ್ಪಲು ವಾರಿಯರ್ಸ್, ಟೀಮ್ ನಾಲ್ನಾಡ್ ಪ್ಯಾಂಥರ್ಸ್ ತಂಡಗಳು ಪಾಲ್ಗೊಳ್ಳಲಿವೆ. ಅಂತಿಮವಾಗಿ ಕೆಸರಗದ್ದೆ ನಾಟಿ ಓಟ ಸ್ಪರ್ಧೆ ನಡೆಯಲಿದೆ.