ಸೋಮವಾರಪೇಟೆ, ಜು. 23: ಸೋಮವಾರಪೇಟೆ ಜೆಸಿ ರೇಟ್ಸ್ ವತಿಯಿಂದ ಪ್ರೌಢಾವಾಸ್ಥೆಯಲ್ಲಿ ಮಕ್ಕಳ ಜೀವನ ನಿರ್ವಹಣೆ ಎಂಬ ಜಾಗೃತಿ ಕಾರ್ಯಕ್ರಮ ಸ್ಥಳೀಯ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಸುಪರ್ಣ ಮಾತನಾಡಿ, ಪ್ರೌಢಾವಸ್ಥೆ ಯಲ್ಲಿ ಮಕ್ಕಳ ಶಾರೀರಿಕ ಬೆಳವಣಿಗೆ ಯಲ್ಲಿ ಬದಲಾವಣೆ ಕಾಣಿಸುವದು ಸಹಜ, ಇದರಿಂದ ಮಕ್ಕಳು ಭಯ ಪಡುವ ಅಗತ್ಯವಿಲ್ಲ. ಮಕ್ಕಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತಜ್ಞ ವೈದ್ಯರ ಸಲಹೆ ಪಡೆದು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕ ಶಿವಯ್ಯ, ಜೇಸಿ ರೇಟ್ಸ್ ಅಧ್ಯಕ್ಷೆ ಮಾಯಾ ಗಿರೀಶ್, ಜೇಸಿ ಅಧ್ಯಕ್ಷ ಕೆ.ಎ. ಪ್ರಕಾಶ್, ಬಿಟಿಸಿಜಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್. ಶರಣ್, ವಿಶ್ವಮಾನವ ಕುವೆಂಪು ಶಾಲೆಯ ಮುಖ್ಯೋಪಾಧ್ಯಾಯಿನಿ ಮಿಲ್‍ಟ್ರೆಡ್ ಗೊನ್ಸಾಲ್‍ವೆಸ್, ಜೆಸಿ ರೇಟ್ಸ್‍ನ ಸದಸ್ಯೆ ಶೈಲಾ ವಸಂತ್ ಇದ್ದರು.