ಸುಂಟಿಕೊಪ್ಪ, ಜು. 24: ಸುಂಟಿಕೊಪ್ಪ ಸಮೀಪದ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರೂ. 30,01,083 ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎ. ಮೊಣ್ಣಪ್ಪ ತಿಳಿಸಿದರು.

2017-2018ನೇ ಸಾಲಿನ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಬಿ.ಎ. ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು (ಎ) ದರ್ಜೆ ಪಡೆದಿರುವದಕ್ಕೆ ಸಭೆಯಲ್ಲಿ ಹಾಜರಿದ್ದ 820 ಮಂದಿ ಸದಸ್ಯರುಗಳು ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿದರು. ಸಂಘದಲ್ಲಿ ವ್ಯವಹಾರ ಮಾಡದ ಸದಸ್ಯರುಗಳಿಗೆ ಚುಣಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡದಿರುವ ಬಗ್ಗೆ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿ ಈ ಕಾನೂನನ್ನು ಸಡಿಲಿಸಬೇಕೆಂದು ಪಟ್ಟು ಹಿಡಿದರು. ಅಧ್ಯಕ್ಷ ಮೊಣ್ಣಪ್ಪ ಇದು ಸರಕಾರದ ಕಾನೂನು ಆಗಿದೆ. ಆಡಳಿತ ಮಂಡಳಿಯ ಪಾತ್ರ ಇರುವದಿಲ್ಲ ಎಂದು ಸ್ಪಷ್ಟನೆ ನೀಡಿದರು. ಸಹಕಾರ ಸಂಘದ ಚುನಾವಣೆÉಯನ್ನು ವಾರ್ಡುಗಳಾಗಿ ವಿಂಗಡಿಸಿ ಚುನಾವಣೆ ನಡೆಸಲು ಸದಸ್ಯರುಗಳು ಆಗ್ರಹಿಸಿದರು. ಚರ್ಚೆಯಲ್ಲಿ ಸದಸ್ಯರುಗಳಾದ ನಿವೃತ್ತ ಲೆಕ್ಕ ಪರಿಶೋಧಕ ಪಾಸೂರ ಬೋಪಯ್ಯ, ಎಂ.ಡಿ. ರಮೇಶ, ಎಂ.ಬಿ. ಬೋಪಯ್ಯ, ಬಿ.ಎ. ಕರುಂಬಯ್ಯ ಪಾಲ್ಗೊಂಡರು. ಅಧ್ಯಕ್ಷತೆ ವಹಿಸಿದ್ದ ಮೊಣ್ಣಪ್ಪ ಮಾತನಾಡಿ, ಸಂಘವು 1215 ಸದಸ್ಯರುಗಳನ್ನು ಹೊಂದಿದ್ದು, 2017-2018ನೇ ಸಾಲಿನಲ್ಲಿ ರೂ. 10,25,93,773 ಸಾಲ ವಿತರಿಸಲಾಗಿದೆ. ರೂ. 7,24,95,356 ಠೇವಣಿಯನ್ನು ಹೊಂದಿದೆ. ರೂ. 30 ಲಕ್ಷ ಲಾಭಗಳಿಸಿದೆ. ರೂ. 16,09,13,943 ದುಡಿಯುವ ಬಂಡವಾಳ ಹೊಂದಿದ್ದು ಸದಸ್ಯರುಗಳಿಗೆ ಶೇ. 15 ರಷ್ಟು ಡಿವಿಡೆಂಡ್ ಕೊಡಲು ತೀರ್ಮಾನಿಸಲಾಗಿದೆ. ಮುಂದೆ ಸಂಘದ ಚುನಾವಣೆ ಬರಲಿದ್ದು ಮುಂದೆ ಬರುವ ಅಧ್ಯಕ್ಷರು ನಿರ್ದೇಶರು ಸಂಘವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿ ಸದಸ್ಯರುಗಳು ಇನ್ನಷ್ಟು ವ್ಯವಹಾರ ನಡೆಸಿ ಸಂಘದ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಮಾದಾಪುರ ವಿಎಸ್‍ಎಸ್‍ಎನ್ ವ್ಯಾಪ್ತಿಯ ಪದವಿಪೂರ್ವ ಕಾಲೇಜು ಹಾಗೂ ಪೌಢಶಾಲೆಯಲ್ಲಿ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಘದಿಂದ ನಗದು ಬಹುಮಾನ ನೀಡಲಾಯಿತು. ಸಂಘದ ಸದಸ್ಯರೂ, ಮಾಜಿ ಅಧ್ಯಕ್ಷರೂ, ಶಾಸಕರೂ ಆದ ಎಂ.ಪಿ. ಅಪ್ಪಚ್ಚು ರಂಜನ್ ಸಭೆಗೆ ಮುನ್ನ ಬ್ಯಾಂಕಿಗೆ ಬಂದು ಶುಭ ಹಾರೈಸಿ ಕಾರ್ಯನಿಮಿತ ತೆರಳಿದರು. ಸಭೆÀಯಲ್ಲಿ ನಿರ್ದೇಶಕರುಗಳಾದ ಬಿ.ಎಂ. ಸೋಮಯ್ಯ, ಎನ್.ಸಿ. ಕಾಳಪ್ಪ, ಎನ್.ಎಸ್. ಬೆಳ್ಯಪ್ಪ, ಸಿ.ಎ. ತಮ್ಮಯ್ಯ, ಬಿ.ಎ. ದೂಮಪ್ಪ, ಜೂಲಿ ಪೊನ್ನವ್ವ, ಪಿ.ಕೆ. ಗಣೇಶ ಎನ್.ಎಂ. ಬಿದ್ದಣಿ ಡಿಸಿಸಿ ಬ್ಯಾಂಕ್ ಅಧಿಕಾರಿ ಎಂ.ಜೆ. ಜಯಪ್ರಕಾಶ್, ಸಂಘದ ಸಿಇಓ ಬಿ.ಎನ್. ಕಾವೇರಪ್ಪ, ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿರ್ದೇಶಕ ಸಿ.ಎ. ತಮ್ಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ತಿಲಕ್ ಕುಮಾರ್ ವಂದಿಸಿದರು.