ಉಡುಪಿ, ಜು.23 : ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಬಳಿಕ ಊಹಾಪೆÇೀಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಮಠದ ಡಿವಿಆರ್ ನಾಪತ್ತೆಯಾಗಿದೆ. ಸ್ವಾಮೀಜಿಗಳ ಅಸಹಜ ಸಾವಿನ ಕುರಿತಂತೆ ಎಸ್.ಪಿ.ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈ ವೇಳೆ ಸಿಸಿಟಿವಿ ವಿಡಿಯೋಗಳನ್ನು ಸೇವ್ ಮಾಡುತ್ತಿದ್ದ ಡಿವಿಆರ್ ಇದೀಗ ಮೂಲ ಮಠದಿಂದ ಕಾಣೆಯಾಗಿರುವದು ಬೆಳಕಿಗೆ ಬಂದಿದೆ. ಅಲ್ಲದೇ ಶಿರೂರು ಮೂಲಮಠದಿಂದ ಕೆಲ ವಸ್ತುಗಳು ಕೂಡ ಕಾಣೆಯಾಗಿವೆ. ಶಿರೂರು ಮೂಲ ಮಠದ ಪ್ರವೇಶ ದ್ವಾರದಲ್ಲೇ ಒಂದು ಸಿಸಿಟಿವಿ ಇತ್ತು. ಇದರಲ್ಲಿ ಮಠಕ್ಕೆ ಬರುವ ಎಲ್ಲಾ ಭಕ್ತರ ಬಗ್ಗೆ ದಾಖಲಾಗುತ್ತಿತ್ತು. ಯಾಕಂದ್ರೆ ಇದೊಂದು ದಾರಿಯ ಮೂಲಕವೇ ಭಕ್ತರು ಮಠ ಪ್ರವೇಶವಾಗಬೇಕಿತ್ತು. ಹೀಗಾಗಿ ಪೆÇಲೀಸರು ಇದೊಂದೇ ಸಾಕ್ಷಿ ಅಂತ ಪೆÇಲೀಸರು ನಂಬಿದ್ದರು. ತನಿಖೆಯ ಆರಂಭದಲ್ಲಿಯೇ ಪೆÇಲೀಸರು ಡಿವಿಆರ್ ಸಿಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು. ಅಲ್ಲದೇ ಡಿವಿಆರ್ ಅನ್ನು ಸ್ವತಃ ಸ್ವಾಮೀಜಿಯವರೇ ಬೇರೆ ಮಠಕ್ಕೆ ಶಿಫ್ಟ್ ಮಾಡಿದ್ದಾರೆಯೋ ಎನ್ನುವದರ ಬಗ್ಗೆ ತನಿಖೆ ನಡೆದಿತ್ತು. ಆದ್ರೆ ಎಲ್ಲಿ ಹುಡುಕಾಡಿದ್ರೂ ಡಿವಿಆರ್ ಮಾತ್ರ ಕಾಣಿಸುತ್ತಿಲ್ಲ.